ಕರ್ತವ್ಯದೊಂದಿಗೆ ಆರೋಗ್ಯದ ಕಾಳಜಿಯೂ ಅಗತ್ಯ

ಮಂಗಳವಾರ, ಮಾರ್ಚ್ 19, 2019
21 °C
ಪೊಲೀಸ್‌ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿ ಕ್ರಿಷ್ಟಪ್ಪ ಸಲಹೆ

ಕರ್ತವ್ಯದೊಂದಿಗೆ ಆರೋಗ್ಯದ ಕಾಳಜಿಯೂ ಅಗತ್ಯ

Published:
Updated:
ಕರ್ತವ್ಯದೊಂದಿಗೆ ಆರೋಗ್ಯದ ಕಾಳಜಿಯೂ ಅಗತ್ಯ

ರಾಯಚೂರು: ಪೊಲೀಸ್‌ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ ಎಂದು ನಿವೃತ್ತ ಪೊಲೀಸ್‌ ಅಧಿಕಾರಿ ಕ್ರಿಷ್ಟಪ್ಪ ಸಲಹೆ ನೀಡಿದರು.ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಯಿಂದ ಸೋಮವಾರ ಆಯೋಜಿಸಿದ್ದ ಪೊಲೀಸ್‌ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಪೊಲೀಸರು ಹಗಲಿರುಳು ಸಾರ್ವಜನಿಕರ ಸ್ವತ್ತು ರಕ್ಷಣೆ ಮಾಡಿ, ಸಮಾಜದಲ್ಲಿ ಶಾಂತಿ ಕಾಪಾಡು ತ್ತಾರೆ. ಆದರೆ, ಆರೋಗ್ಯವನ್ನು ಕಾಪಾಡಿ ಕೊಳ್ಳುವುದರಿಂದ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ ಎಂದರು.ಸಮಾಜದಲ್ಲಿ ಪೊಲೀಸ್ ಇಲಾಖೆಗೆ ಇರುವ ಗೌರವ ಹಾಗೂ ಘನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪೊಲೀಸರು ಕಾರ್ಯನಿರ್ವಹಿಸುವ ಮೂಲಕ ಸಮಾಜದ ರಕ್ಷಣೆ ಮಾಡಬೇಕು. ನಿವೃತ್ತಿಯಾದವರಿಂದ ಅನುಭವ ಪಡೆ ದರೆ ದಕ್ಷತೆಯಿಂದ ಕೆಲಸ ಮಾಡಲು ಸಹ ಕಾರಿಯಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಪೊಲೀಸರ ಕಾರ್ಯ ಅನನ್ಯವಾಗಿದ್ದು, ಸಮಾಜದ ರಕ್ಷಣೆ ಮಾಡುವಂತಹ ಪೊಲೀಸರಿಗೆ ಎಲ್ಲರೂ ಸಹಕಾರ ಮಾಡಬೇಕು ಎಂದು ಹೇಳಿದರು.ಪೊಲೀಸ್‌ ಇಲಾಖೆಯ ನೀತಿ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಸಾರ್ವಜನಿಕರು ಸಹಕಾರ ಕಲ್ಪಿಸಿದರೆ ಅಹಿತಕರ ಘಟನೆಗಳನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಪೊಲೀಸರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವುದರಿಂದ ಉತ್ತಮವಾಗಿ ಕರ್ತವ್ಯ ನಿರ್ವಹಣೆಗೆ ಅನಕೂಲವಾಗಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿರಾಂ ಜಿ.ಶಂಕರ್‌ ಮಾತನಾಡಿ, ‘ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸಲು ಆರೋಗ್ಯದಿರುವುದು ಅಗತ್ಯ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಮಾತನಾಡಿ, ಪೊಲೀಸ್‌ ಧ್ವಜ ದಿನಾಚರಣೆ ಆಚರಣೆಯ ಬಗ್ಗೆ ಹಾಗೂ 2017–18ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ಪೊಲೀಸರ ಕುರಿತು ವಿವರಿಸಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಪಾಟೀಲ್ ಇದ್ದರು.

**

ಸಮಾಜದಲ್ಲಿ ಶಾಂತಿ ಸುವವ್ಯಸ್ಥೆ ನೆಲೆಸಬೇಕಾದರೆ ಪೊಲೀಸ್‌ ಇಲಾಖೆಯು ತುಂಬಾ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಜನರು ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳಬೇಕು – ಡಾ.ಬಗಾದಿ ಗೌತಮ್‌, ಜಿಲ್ಲಾಧಿಕಾರಿ

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry