‘ಉಗ್ರರ ಸಂಹರಿಸಿ ಸೇನೆ ವಾಪಸ್‌’

6

‘ಉಗ್ರರ ಸಂಹರಿಸಿ ಸೇನೆ ವಾಪಸ್‌’

Published:
Updated:

ವಾಷಿಂಗ್ಟನ್‌: ‘ಸಿರಿಯಾದಲ್ಲಿ ಐಎಸ್‌ ಉಗ್ರರನ್ನು ಸಂಪೂರ್ಣ ಸಂಹರಿಸಿದ ಮೇಲೆ ನಮ್ಮ ಸೇನಾಪಡೆಯನ್ನು ಪಾಪಸ್‌ ಕರೆಸಿಕೊಳ್ಳುತ್ತೇವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

ಸೇನಾಪಡೆ ಮುಖ್ಯಸ್ಥರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐಎಸ್‌ ಉಗ್ರರನ್ನು ಸದೆ ಬಡಿಯುವ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ. ಸೇನಾ ಪಡೆ ವಾಪಸ್‌ ಕರೆಸಿಕೊಳ್ಳುವ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.

ಸಿರಿಯಾದಲ್ಲೇ ಸೇನಾಪಡೆ ಉಳಿಸುವ ಬಗ್ಗೆ ಪೆಂಟಗನ್‌ನ ಪ್ರಮುಖ ನಾಯಕರು ಆಸಕ್ತಿ ಹೊಂದಿರುವ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಟ್ರಂಪ್‌, ‘ಸಿರಿಯಾದಲ್ಲಿ ನಮ್ಮ ಸೇನೆ ಇರುವುದರಿಂದ ನಮಗಿಂತ ಇತರೆ ರಾಷ್ಟ್ರಗಳಿಗೆ ಹೆಚ್ಚು ಉಪಯೋಗವಾಗುತ್ತಿದೆ. ಸೇನೆಗೆ ನಾವು ಸಾಕಷ್ಟು ವೆಚ್ಚ ಮಾಡುತ್ತಿದ್ದೇವೆ. ಮಧ್ಯ ಪೂರ್ವ ರಾಷ್ಟ್ರದಲ್ಲಿ ಸೇನೆ ಮುಂದುವರಿಸಬೇಕಾದರೆ ಉಳಿದ ರಾಷ್ಟ್ರಗಳು ವೆಚ್ಚ ಭರಿಸಲು ಕೈಜೋಡಿಸಬೇಕು’ ಎಂದು ಸೌದಿ ಅರೆಬಿಯಾ ಉದ್ದೇಶಿಸಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry