‘ಗಂಡಸ್ಥನ ಗೃಹಸ್ಥರಿಗೆ ಸಂಬಂಧಿಸಿದ್ದು’

7
ಗದುಗಿನ ಶ್ರೀಗಳ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಟೀಕೆ

‘ಗಂಡಸ್ಥನ ಗೃಹಸ್ಥರಿಗೆ ಸಂಬಂಧಿಸಿದ್ದು’

Published:
Updated:

ಲಕ್ಷ್ಮೇಶ್ವರ (ಗದಗ ಜಿಲ್ಲೆ): ‘ಶಿವಯೋಗ ಮಂದಿರದಲ್ಲಿ ಈಚೆಗೆ ಸೇರಿದ್ದ ವೀರಶೈವ ಲಿಂಗಾಯತ ಮಠಾಧೀಶರು ಗಂಡಸರೂ ಅಲ್ಲ, ಹೆಂಗಸರೂ ಅಲ್ಲ ಎಂದು ಗದುಗಿನ ತೋಂಟದ ಸ್ವಾಮೀಜಿ ಹೇಳಿದ್ದಾರೆ. ಗಂಡಸ್ಥನದ ವಿಚಾರ ಮಾತನಾಡಲು ಅವರೇನು ಗೃಹಸ್ಥರೇ. ಜಗದ್ಗುರು ಪೀಠದಲ್ಲಿ ಕುಳಿತ ಶ್ರೀಗಳು ಸ್ಥಾನ ಮಾನದ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕಿತ್ತು’ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಟೀಕಿಸಿದರು.

ಮಠದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ‘ಮಠಾಧಿಪತಿಗಳ ಕುರಿತು ಮಾತನಾಡುವಾಗ ಎಚ್ಚರದಿಂದ ಇರುವುದು ಒಳ್ಳೆಯದು. ಕೀಳು ಮಟ್ಟದ ಶಬ್ದಗಳನ್ನು ಬಳಸಬಾರದಿತ್ತು. ಶ್ರದ್ಧಾ ಕೇಂದ್ರವಾಗಿರುವ ಯಲ್ಲಮ್ಮನಗುಡ್ಡ ವಿಚಾರ ಎತ್ತಿರುವುದು ಸರಿ ಅಲ್ಲ. ನಿಮ್ಮ ದೃಷ್ಟಿಯಲ್ಲಿ ಅವರು ಕೀಳು ಎನ್ನುವುದಾದರೆ, ಅವರ ದೃಷ್ಟಿಯಲ್ಲಿ ನೀವೂ ಕೀಳಾಗಿ ಕಾಣುತ್ತಿರಿ’ ಎಂದು ಟೀಕಿಸಿದ್ದಾರೆ.

‘ಶಿವಯೋಗ ಮಂದಿರದಲ್ಲಿ ತೋಂಟದ ಶ್ರೀಗಳು ತಿಳಿದುಕೊಂಡಂತೆ ಯಾವುದೇ ರಾಜಕೀಯ ವಿಚಾರ ಮಾತನಾಡಿಲ್ಲ. ವೀರಶೈವ ಲಿಂಗಾಯತದ ವಿಚಾರವಾಗಿಯೂ ಮಾತನಾಡಿಲ್ಲ‘ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry