ಶುಕ್ರವಾರ, ಆಗಸ್ಟ್ 14, 2020
21 °C

ಇಂದಿನಿಂದ ವೈದ್ಯಕೀಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದಿನಿಂದ ವೈದ್ಯಕೀಯ ಸಮ್ಮೇಳನ

ಬೆಂಗಳೂರು: ‘ಮಕ್ಕಳ ತುರ್ತು ವೈದ್ಯಕೀಯ ಚಿಕಿತ್ಸೆ‘ಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನ ‘ನಾಪೆಮ್‌– 2018’ವು ಏಪ್ರಿಲ್‌ 6ರಿಂದ 8ರವರೆಗೆ ಮತ್ತಿಕೆರೆಯಲ್ಲಿರುವ ಎಂ.ಎಸ್‌.ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ನಡೆಯಲಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಕಾಲೇಜಿನ ವ್ಯವಸ್ಥಾಪಕ ಅಧ್ಯಕ್ಷೆ ಡಾ.ಅರುಣಾ ಸಿ.ರಮೇಶ್‌ ಮಾಹಿತಿ ನೀಡಿದರು.‘ಗಾಯಗೊಂಡ ಹಿರಿಯರು ಹಾಗೂ ಮಕ್ಕಳಿಗೆ ತುರ್ತು ಚಿಕಿತ್ಸೆ ನೀಡುವ ವ್ಯವಸ್ಥೆಯ ವಿಷಯದಲ್ಲಿ ಭಾರತ ತುಂಬಾ ಹಿಂದಿದೆ. ಆರೋಗ್ಯ ಸೇವೆ ಕ್ಷೇತ್ರದಲ್ಲಿರುವವರಿಗೆ ತರಬೇತಿ ನೀಡಿ ಮಕ್ಕಳಿಗೆ ಶೀಘ್ರದಲ್ಲಿ ಅಗತ್ಯ ಚಿಕಿತ್ಸೆ ತಲುಪುವಂತೆ ಮಾಡುವುದು ನಮ್ಮ ಉದ್ದೇಶ’ ಎಂದರು.

‘ಭಾರತದಲ್ಲಿ 14 ವರ್ಷದೊಳಗಿನವರು ಶೇ 28.2 ಇದ್ದಾರೆ. ಮಕ್ಕಳಿಗೆ ಚಿಕ್ಕಪುಟ್ಟ ಆರೋಗ್ಯ ಸಮಸ್ಯೆಯಾದರೆ ಮಕ್ಕಳ ತಜ್ಞರು ಔಷಧ ನೀಡುತ್ತಾರೆ. ಆದರೆ, ಅಪಘಾತ, ಅಪಸ್ಮಾರ, ಗೋಲಿ–ನಾಣ್ಯಗಳಂಥ ವಸ್ತುಗಳನ್ನು ನುಂಗಿದಾಗ ತುರ್ತು ಚಿಕಿತ್ಸೆ ನೀಡುವುದು ಹೇಗೆ ಎನ್ನುವ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ’.

ಅಪೊಲೊ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ವೆಂಕಟೇಶ್‌ ಎ.ಎನ್‌., ‘ಅಪಘಾತ ಉಂಟಾದಾಗ ಕಡಿಮೆ ಸಮಯದಲ್ಲಿ ಮಗುವಿನ ಸಮಸ್ಯೆಯನ್ನು ಸ್ಪಷ್ಟವಾಗಿ ಗುರುತಿಸುವುದು ಹಾಗೂ ಚಿಕಿತ್ಸೆ ನೀಡಬೇಕಾಗುತ್ತದೆ. ಇದರಿಂದ ಮಗು ಬೇಗ ಹುಷಾರಾಗುತ್ತದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಎಲ್ಲ ಹಂತದ ಸಿಬ್ಬಂದಿಗೂ ಮಾಹಿತಿ ಇರಬೇಕು’ ಎಂದರು.

ಮೊದಲ ದಿನ ಆರೋಗ್ಯ ಸೇವೆ ಕ್ಷೇತ್ರದಲ್ಲಿರುವ ಸುಮಾರು 500 ಜನರಿಗೆ ‘ಮಕ್ಕಳಿಗೆ ತುರ್ತು ಚಿಕಿತ್ಸೆ’ ನೀಡುವುದು ಹೇಗೆ ಎನ್ನುವುದನ್ನು ಪ್ರಾತ್ಯಕ್ಷಿಕೆಗಳ ಮೂಲಕ ಹೇಳಿಕೊಡಲಾಗುವುದು. ಏಪ್ರಿಲ್‌ 7 ಹಾಗೂ 8ರಂದು ಅಮೆರಿಕ, ಇಂಗ್ಲೆಂಡ್‌, ಬಾಂಗ್ಲಾದೇಶ, ಶ್ರೀಲಂಕಾ, ದುಬೈ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಿಂದ 14 ಮಂದಿ ತಜ್ಞರು ಮಕ್ಕಳ ತುರ್ತು ಚಿಕಿತ್ಸೆಯಲ್ಲಾದ ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿಗಳ ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದರು .

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.