ಶನಿವಾರ, ಜೂನ್ 6, 2020
27 °C
ಟ್ರಯಥ್ಲಾನ್‌: ಮಹಿಳಾ ವಿಭಾಗದಲ್ಲಿ ಡಫಿಗೆ ಚಿನ್ನ

ಚಿನ್ನ ಗೆದ್ದ ಶೊಯೆಮನ್‌

ಪಿಟಿಐ Updated:

ಅಕ್ಷರ ಗಾತ್ರ : | |

ಚಿನ್ನ ಗೆದ್ದ ಶೊಯೆಮನ್‌

ಗೋಲ್ಡ್‌ ಕೋಸ್ಟ್‌: ದಕ್ಷಿಣ ಆಫ್ರಿಕಾದ ಹೆನ್ರಿ ಶೊಯೆಮನ್‌ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದ ಟ್ರಯಥ್ಲಾನ್‌ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದರು.

ಗುರುವಾರ ನಡೆದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಹೆನ್ರಿ 52 ನಿಮಿಷ 31 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು.

ಆಸ್ಟ್ರೇಲಿಯಾದ ಜೇಕಬ್‌ ಬರ್ತ್‌ವಿಷಲ್‌ ಅವರು ಈ ವಿಭಾಗದ ಬೆಳ್ಳಿ ತಮ್ಮದಾಗಿಸಿಕೊಂಡರು. ಜೇಕಬ್‌   52 ನಿಮಿಷ 38 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು. ಸ್ಕಾಟ್ಲೆಂಡ್‌ನ ಮಾರ್ಕ್‌ ಆಸ್ಟಿನ್‌ (52:44ಸೆ.) ಕಂಚಿನ ಪದಕಕ್ಕೆ ಕೊರಳೊಡ್ಡಿದರು.

2016 ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಇಂಗ್ಲೆಂಡ್‌ನ ಅಲಸ್ಟೇರ್‌ ಬ್ರೌನ್‌ಲೀ ಮತ್ತು ಜೊನಾಥನ್‌ ಬ್ರೌನ್‌ಲೀ ಅವರು ಕ್ರಮವಾಗಿ ಏಳು ಮತ್ತು 10ನೇ ಸ್ಥಾನಗಳೊಂದಿಗೆ ಸ್ಪರ್ಧೆ ಮುಗಿಸಿದರು.

ಡಫಿಗೆ ಚಿನ್ನ: ಮಹಿಳೆಯರ ವಿಭಾಗದಲ್ಲಿ ಬರ್ಮುಡಾದ ಫ್ಲೋರಾ ಡಫಿ ಚಿನ್ನ ಗೆದ್ದರು.

ಫ್ಲೋರಾ ಅವರು 56 ನಿಮಿಷ 50 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಇಂಗ್ಲೆಂಡ್‌ನ ಜೆಸ್ಸಿಕಾ ಲಿಯರ್‌ಮಂತ್‌ ಬೆಳ್ಳಿ ತಮ್ಮದಾಗಿಸಿಕೊಂಡರು. ಅವರು 57 ನಿಮಿಷ 33 ಸೆಕೆಂಡುಗಳಲ್ಲಿ ಗುರಿ ಸೇರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.