ಶುಕ್ರವಾರ, ಡಿಸೆಂಬರ್ 13, 2019
19 °C

ಮಿಥಾಲಿ ಬಳಗಕ್ಕೆ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

ಮಿಥಾಲಿ ಬಳಗಕ್ಕೆ ಗೆಲುವು

ನಾಗಪುರ (ಪಿಟಿಐ): ಆರಂಭಿಕ ಬ್ಯಾಟ್ಸ್‌ವುಮನ್‌ ಸ್ಮೃತಿ ಮಂದಾನಾ ಅವರ ಅರ್ಧಶತಕದ (86; 4 ಸಿಕ್ಸರ್‌, 5 ಬೌಂಡರಿ) ನೆರವಿನಿಂದ ಭಾರತದ ಮಹಿಳೆಯರ ತಂಡವು ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಒಂದು ವಿಕೆಟ್‌ ಅಂತರದ ರೋಚಕ ಜಯ ಸಾಧಿಸಿತು.

ಇದರೊಂದಿಗೆ ಆತಿಥೇಯ ತಂಡವು ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದೆ.

ಇಲ್ಲಿನ ವಿದರ್ಭ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡವು 208 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿತು. ಎಫ್‌.ಸಿ. ವಿಲ್ಸನ್‌ ಅವರು 45 ರನ್‌ ಗಳಿಸಿ, ತಂಡವು 200ರ ಗಡಿ ದಾಟಲು ನೆರವಾದರು. ಭಾರತದ ಪರವಾಗಿ ಪೂನಂ ಯಾದವ್‌ 4 ಹಾಗೂ ಏಕ್ತಾ ಬಿಷ್ಠ್‌ ಅವರು 3 ವಿಕೆಟ್‌ ಕಬಳಿಸಿದರು.

ಎದುರಾಳಿ ತಂಡ ನೀಡಿದ ಸವಾಲನ್ನು ಬೆನ್ನತ್ತಿದ್ದ ಭಾರತ ತಂಡವು, ಒಂದು ಓವರ್‌ ಉಳಿದಿರುವಂತೆ ಗೆಲುವಿನ ದಡ ಸೇರಿತು. ಮಂದಾನಾ ಅವರಿಗೆ ಹರ್ಮನ್‌ಪ್ರೀತ್‌ ಕೌರ್‌ (21), ದೀಪ್ತಿ ಶರ್ಮಾ (24) ಸಾಥ್‌ ನೀಡಿದರು.

ಪ್ರತಿಕ್ರಿಯಿಸಿ (+)