ಮುಂಬೈ ಇಂಡಿಯನ್ಸ್‌ಗೆ ಆರಂಭಿಕ ಆಘಾತ

ಮಂಗಳವಾರ, ಮಾರ್ಚ್ 19, 2019
21 °C

ಮುಂಬೈ ಇಂಡಿಯನ್ಸ್‌ಗೆ ಆರಂಭಿಕ ಆಘಾತ

Published:
Updated:
ಮುಂಬೈ ಇಂಡಿಯನ್ಸ್‌ಗೆ ಆರಂಭಿಕ ಆಘಾತ

ನವದೆಹಲಿ: ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ 11ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್-  ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಮುಂದುವರಿದಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ  ಟಾಸ್ ಗೆದ್ದ ಸಿಎಸ್‍ಕೆ ಬೌಲಿಂಗ್ ಆಯ್ಕೆ ಮಾಡಿತ್ತು. ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಇವಿನ್ ಲೂವಿಸ್ ಆರಂಭಿಕ ದಾಂಡಿಗರಾಗಿ ಕಣಕ್ಕಿಳಿದಿದ್ದರು.

ಆದರೆ ಎರಡನೇ  ಓವರ್‍‍ನಲ್ಲಿ ಚಹಾರ್ ಬೌಲಿಂಗ್ ದಾಳಿಗೆ ಲೂವಿಸ್ ವಿಕೆಟ್ ಉರುಳಿತು. 2 ಎಸೆತಗಳನ್ನು ಎದುರಿಸಿದ ಲೂಯಿಸ್ ರನ್ ಗಳಿಸಿಲ್ಲ.

ಆರಂಭದಲ್ಲೇ ಆಘಾತ ಎದುರಿಸಿದ್ದ ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ಉತ್ತಮ ಪ್ರದರ್ಶನ ನೀಡಿದ್ದರೂ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲಲಿಲ್ಲ. ನಾಲ್ಕನೇ ಓವರ್‍‍ನಲ್ಲಿ ವಾಟ್ಸನ್ ಎಸೆತಕ್ಕೆ ರಾಯ್ಡುಗೆ ಕ್ಯಾಚ್ ನೀಡಿದ ರೋಹಿತ್ 18 ಎಸೆತಗಳಲ್ಲಿ 15 ರನ್ ಗಳಿಸಿದ್ದರು.

9 ಓವರ್‍‍ಗಳು ಮುಗಿದಿದ್ದು ಮುಂಬೈ ತಂಡ ಎರಡು ವಿಕೆಟ್ ನಷ್ಟಕ್ಕೆ 62  ರನ್ ಗಳಿಸಿದೆ. ಇದೀಗ  ಕ್ರೀಸ್ ನಲ್ಲಿ ಇಶಾನ್ ಕಿಶನ್  ಮತ್ತು ಸೂರ್ಯ ಕುಮಾರ್ ಯಾದವ್ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry