ರಾಮನಗರ ತಾಲ್ಲೂಕಿನ ಚಿಕ್ಕೇನಹಳ್ಳಿ ಕೆರೆಯಲ್ಲಿ ಮುಳುಗಿ ಮೂವರು ಸಾವು

ಬುಧವಾರ, ಮಾರ್ಚ್ 27, 2019
22 °C

ರಾಮನಗರ ತಾಲ್ಲೂಕಿನ ಚಿಕ್ಕೇನಹಳ್ಳಿ ಕೆರೆಯಲ್ಲಿ ಮುಳುಗಿ ಮೂವರು ಸಾವು

Published:
Updated:
ರಾಮನಗರ ತಾಲ್ಲೂಕಿನ ಚಿಕ್ಕೇನಹಳ್ಳಿ ಕೆರೆಯಲ್ಲಿ ಮುಳುಗಿ ಮೂವರು ಸಾವು

ರಾಮನಗರ: ತಾಲ್ಲೂಕಿನ ಚಿಕ್ಕೇನಹಳ್ಳಿ ಕೆರೆಯಲ್ಲಿ ಮುಳುಗಿ ಭಾನುವಾರ‌ ಮೂವರು ಮೃತಪಟ್ಟಿದ್ದಾರೆ.

ಚನ್ನಪಟ್ಟಣದ ಹನುಮಂತ ನಗರದ ನಿವಾಸಿ ಶೇಖರ್ (39) ಅವರ ಪತ್ನಿ ಸುಮಾ ಹಾಗೂ ಧನು (8) ಮೃತರು.‌ ಸಂಬಂಧಿಕರಾದ ರಾಜು ಎಂಬುವರ ಮನೆಗೆ ಬಂದಿದ್ದ ಅವರು ಕೆರೆಗೆ ತೆರಳಿದ್ದರು.‌ ಈ ಸಂದರ್ಭ ಮಕ್ಕಳು ಆಟವಾಡುತ್ತಾ ನೀರಿನಲ್ಲಿ ಮುಳುಗಿದ್ದು, ಅವರ ರಕ್ಷಣೆಗೆ ಧಾವಿಸಿದ ದಂಪತಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬಾಲಕಿ ಹಂಸ ತೀವ್ರವಾಗಿ ಅಸ್ವಸ್ಥರಾಗಿದ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ.‌ ರಾಮನಗರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry