7

ಗುತ್ತಿಗೆದಾರರಿಗೆ ₹4850 ಕೋಟಿ ಬಿಲ್‌ ಪಾವತಿ

Published:
Updated:
ಗುತ್ತಿಗೆದಾರರಿಗೆ ₹4850 ಕೋಟಿ ಬಿಲ್‌ ಪಾವತಿ

ಬೆಂಗಳೂರು: ಜನವರಿಯಿಂದ ಮಾರ್ಚ್‌ 31ರ ಅವಧಿಯಲ್ಲಿ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ಒಟ್ಟು ₹4,850 ಕೋಟಿ ಬಿಲ್ ಪಾವತಿ

ಆಗಿದೆ.

ಆದಾಯ ತೆರಿಗೆ ಇಲಾಖೆ ಮಹಾ ನಿರ್ದೇಶಕ ಬಿ.ಆರ್‌.ಬಾಲಕೃಷ್ಣನ್‌ ಅವರು ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾಗೆ ಪತ್ರ ಬರೆದು ‘ಚುನಾವಣೆ ಸಂದರ್ಭದಲ್ಲಿ ಬಳಕೆ ಮಾಡುವ ಉದ್ದೇಶದಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ಹೀಗಾಗಿ, ದಾಖಲೆಗಳನ್ನು ಸಲ್ಲಿಸಿ’ ಎಂದು ಕೋರಿದ್ದರು.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ರಾಷ್ಟ್ರೀಯ ಹೆದ್ದಾರಿ ಯೋಜನೆ, ನೀರಾವರಿ ನಿಗಮಗಳು, ಪಂಚಾಯತ್ ರಾಜ್‌ ಸೇರಿ ವಿವಿಧ ಇಲಾಖೆಗಳಿಂದ ಎಷ್ಟು ಹಣ ಪಾವತಿ ಮಾಡಲಾಗಿದೆ ಎಂಬುದರ ಬಗ್ಗೆ ಮಂಗಳವಾರದೊಳಗೆ ಮಾಹಿತಿ ನೀಡಬೇಕು ಎಂದು ಎಲ್ಲ ಇಲಾಖೆಗಳ ಮುಖ್ಯಸ್ಥರು ತಮ್ಮ ಕೆಳಗಿನ ಅಧಿಕಾರಿಗಳಿಗೆ ಶನಿವಾರವೇ ಫ್ಯಾಕ್ಸ್ ಮೂಲಕ ತುರ್ತು ಸಂದೇಶ ರವಾನಿಸಿದ್ದಾರೆ.

ಗುತ್ತಿಗೆದಾರರಿಗೆ ಇಲ್ಲಿಯವರೆಗೆ ನೀಡಿರುವ ನಗದು ಪಾವತಿ ಪತ್ರಗಳ (ಲೆಟರ್ ಆಫ್ ಕ್ರೆಡಿಟ್–ಎಲ್ಒಸಿ) ದಾಖಲೆ, ಬಿಡುಗಡೆ ಮಾಡಿರುವ

ಒಟ್ಟು ಮೊತ್ತ ಸೇರಿದಂತೆ ಸಮಗ್ರ ವಿವರಗಳನ್ನು ದಾಖಲೆ ಸಹಿತ ಸಲ್ಲಿಸುವಂತೆ ಸಂದೇಶದಲ್ಲಿ ಸೂಚಿಸಲಾಗಿದೆ ಎಂದು ಮೂಲಗಳು ಖಚಿತ ಪಡಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry