ಭಾನುವಾರ, ಡಿಸೆಂಬರ್ 15, 2019
19 °C

ಅಣ್ವಸ್ತ್ರ ತಗ್ಗಿಸುವ ಚರ್ಚೆಗೆ ಉತ್ತರ ಕೊರಿಯಾ ಸಿದ್ಧವಾಗಿದೆ : ಯುಎಸ್‌ಎ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಅಣ್ವಸ್ತ್ರ ತಗ್ಗಿಸುವ ಚರ್ಚೆಗೆ ಉತ್ತರ ಕೊರಿಯಾ ಸಿದ್ಧವಾಗಿದೆ : ಯುಎಸ್‌ಎ

ವಾಷಿಂಗ್‌ಟನ್‌ : ‘ಅಣ್ವಸ್ತ್ರಗಳ ಪ್ರಮಾಣ ತಗ್ಗಿಸುವ ಕುರಿತು ಅಮೆರಿಕಾದೊಂದಿಗೆ ಚರ್ಚಿಸಲು ಉತ್ತರ ಕೊರಿಯಾ ಸಿದ್ಧವಾಗಿದೆ’ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಕೊರಿಯಾದ ಅಧ್ಯಕ್ಷ ಕಿಮ್‌ ಜಂಗ್‌ ಉನ್‌ ಅವರು ಟ್ರಂಪ್‌ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬ ಮಾತು ಕೊರಿಯಾದ ಆಡಳಿತಗಾರರಿಂದ ತಿಂಗಳ ಹಿಂದೆಯೇ ಕೇಳಿಬಂದಿತ್ತು.

ಟ್ರಂಪ್‌ ಮತ್ತು ಕಿಮ್‌ ಜಂಗ್‌ ಮುಂದಿನ ತಿಂಗಳು ಭೇಟಿಯಾಗುವ ಸಾಧ್ಯತೆಗಳಿವೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ. ಈ ಭೇಟಿಯ ಕುರಿತು ಉ.ಕೊರಿಯಾ ಇನ್ನೂ ಖಚಿತಪಡಿಸಿಲ್ಲ.

ಕಿಮ್‌ ಜಂಗ್‌ ಉನ್‌ ಚೀನಾಕ್ಕೆ ಮಾರ್ಚ್‌ ಕೊನೆ ವಾರದಲ್ಲಿ ಭೇಟಿ ನೀಡಿ, ಅಲ್ಲಿನ ನಾಯಕರೊಂದಿಗೆ ಚರ್ಚಿಸಿದ್ದರು. ಆಗ ಅಣ್ವಸ್ತ್ರಗಳ ಪ್ರಮಾಣ ತಗ್ಗಿಸುವ ಮಾತುಗಳನ್ನು ಆಡಿದ್ದರು. ‘ಶಾಂತಿ ಮರುಸ್ಥಾಪಿಸುವ ನಮ್ಮ ಪ್ರಯತ್ನಕ್ಕೆ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಹೇಗೆ ಪ್ರತಿಕ್ರಿಯೆ ನೀಡುತ್ತವೆ ಎಂಬುದರ ಮೇಲೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಕಿಮ್‌ ತಿಳಿಸಿದ್ದರು.

ಪ್ರತಿಕ್ರಿಯಿಸಿ (+)