ಐಸಿಯು ಸಿಮ್ಯುಲೇಶನ್‌ ಲ್ಯಾಬ್ ಆರಂಭ

7

ಐಸಿಯು ಸಿಮ್ಯುಲೇಶನ್‌ ಲ್ಯಾಬ್ ಆರಂಭ

Published:
Updated:

ಬೆಂಗಳೂರು: ನರ್ಸಿಂಗ್‌ ಸಿಬ್ಬಂದಿಗೆ ಐಸಿಯುನಲ್ಲಿ ತರಬೇತಿ ನೀಡುವ ಉದ್ದೇಶದಿಂದ ಐಎಚ್‌ಎಚ್‌ಸಿ ಸಂಸ್ಥೆ ನಗರದಲ್ಲಿ ಸಿಮ್ಯುಲೇಶನ್‌ ಲ್ಯಾಬ್‌ ಆರಂಭಿಸಿದೆ.

ಆಸ್ಪತ್ರೆ ಸಿಬ್ಬಂದಿ ಮನೆಮನೆಗೆ ತೆರಳಿ ಅಲ್ಲಿನ ರೋಗಿಗಳಿಗೆ ನೀಡುತ್ತಿರುವ ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚಿಸುವ ಕುರಿತು ಈ ಲ್ಯಾಬ್‌ನಲ್ಲಿ ಸೂಕ್ತ ತರಬೇತಿ ನೀಡಲಾಗುತ್ತದೆ.

‘ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಮನೆಯಲ್ಲೇ ಚಿಕಿತ್ಸೆ ಸಿಗುವುದು ಉತ್ತಮ. ಈ ರೀತಿಯ ಸೇವೆಯಲ್ಲಿ ನಮ್ಮ ಸಂಸ್ಥೆ ಮುಂಚೂಣಿಯಲ್ಲಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಐಎಚ್‌ಎಚ್‌ಸಿ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ತ್ಯಾಗರಾಜನ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry