ಮಾತಿನ ಮೋಡಿ!

7

ಮಾತಿನ ಮೋಡಿ!

Published:
Updated:

ಗುಜರಾತ್‌ನ ಭಾವನಗರದ ತಿಂಬಿ ಗ್ರಾಮದಲ್ಲಿ ಪ್ರದೀಪ ರಾಥೋಡ್ (21) ಎಂಬ ದಲಿತನ ಹತ್ಯೆಯಾಗಿದೆ. ದಲಿತನಾದ ಅವನು ಕುದುರೆ ಸವಾರಿ ಮಾಡುವುದನ್ನು ಮೇಲ್ಜಾತಿಯವರು ಸಹಿಸದೇ ಅವನನ್ನು ಹಾಗೂ ಕುದುರೆಯನ್ನು ಕೊಂದುಹಾಕಿದ್ದಾರೆ (ಪ್ರ.ವಾ., ಮಾ. 31) ಎಂದು ವರದಿಯಾಗಿದೆ.

ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು, ಗುಜರಾತ್‌ನಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದವರು, ನಾಲ್ಕು ವರ್ಷಗಳಿಂದ ದೇಶದ ಪ್ರಧಾನಿಯಾಗಿದ್ದಾರೆ. ‘ಅಚ್ಛೆ ದಿನ್‌ ಆಯೇಂಗೆ!’ ಎಂದು (ದಲಿತರಲ್ಲಿ) ಜನರಲ್ಲಿ ಭರವಸೆ ತುಂಬುತ್ತಲೇ ಇದ್ದಾರೆ! ಇವೆಲ್ಲದರ ನಡುವೆಯೂ ಗುಜರಾತ್‌ನಂಥ ರಾಜ್ಯದಲ್ಲಿ ಈಗಲೂ ಇಂಥ ಹೀನ ಕೃತ್ಯಗಳು ನಡೆಯುತ್ತಲೇ ಇವೆ. ಹಾಗಿದ್ದರೆ, ಮೋದಿಯವರದ್ದು ಕೇವಲ ಮಾತಿನ ಮೋಡಿಯೇ?!’

-ಕೆ.ಜಿ. ಭದ್ರಣ್ಣವರ, ಮುದ್ದೇಬಿಹಾಳ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry