ಶನಿವಾರ, ಡಿಸೆಂಬರ್ 14, 2019
20 °C

‘ಮೊದಲು ಟಿಕೆಟ್‌ ಘೋಷಿಸಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೊದಲು ಟಿಕೆಟ್‌ ಘೋಷಿಸಲಿ’

ಬೆಂಗಳೂರು: ‘ಮೊದಲು ಟಿಕೆಟ್‌ ಘೋಷಣೆಯಾಗಲಿ. ಆಮೇಲೆ ನೋಡೋಣ. ಕಾಂಗ್ರೆಸ್‌ನಲ್ಲಿ ಹೇಗಂತ ಗೊತ್ತಲ್ಲ. ಬಿ ಫಾರಂ ಚುನಾವಣಾಧಿಕಾರಿಗೆ ಕೊಡುವವರೆಗೂ ಗ್ಯಾರಂಟಿ ಇದೆಯಾ ಹೇಳಿ?’

ಮಂಡ್ಯ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಯುವ ಬಗ್ಗೆ ಹಾಲಿ ಶಾಸಕ ಹಾಗೂ ನಟ ಅಂಬರೀಷ್‌ ನೀಡಿದ ಪ್ರತಿಕ್ರಿಯೆ ಇದು. ಟಿಕೆಟ್‌ ಅಂತಿಮಗೊಳಿಸುವ ಕಸರತ್ತಿನಲ್ಲಿ ತೊಡಗಿರುವ ಕೆಪಿಸಿಸಿ ಮತ್ತು ಕಾಂಗ್ರೆಸ್‌ ಹೈಕಮಾಂಡ್‌, ಮತ್ತೆ ಸ್ಪರ್ಧಿಸುವ ಬಗ್ಗೆ ನಿಲುವು ವ್ಯಕ್ತಪಡಿಸುವಂತೆ ಅಂಬರೀಷ್‌ಗೆ ಸೂಚನೆ ನೀಡಿದ್ದವು.

‘ಚುನಾವಣಾ ದಿನಾಂಕ ನಿಗದಿಯಾಗಿದೆ. ಅಭ್ಯರ್ಥಿಗಳ ಘೋಷಣೆ ಆಗ್ಬೇಕು ಅಲ್ವಾ... ಹೈಕಮಾಂಡ್ ಬಳಿ ಏನೆಲ್ಲಾ ಚರ್ಚೆಯಾಗುತ್ತದೆ ನೋಡೋಣ. ವಾಸ್ತವಾಂಶ ಏನಿದೆ ಅಂತ ಗೊತ್ತು ನಂಗೆ’ ಎಂದರು.

‘ಮಂಡ್ಯದ ಐದು ಕ್ಷೇತ್ರಗಳಿಗೆ ತಮ್ಮ ಆಪ್ತರಿಗೆ ಟಿಕೆಟ್ ನೀಡುವಂತೆ ಕೇಳಿದ್ದೀರಂತೆ ಹೌದೇ...’ ಎಂಬ ಪ್ರಶ್ನೆಗೆ, ‘ಐದು ಟಿಕೆಟ್ ಹ್ಯಾಗೆ ಕೇಳೋಕ್ಕಾಗುತ್ತೆ. ಕೆ.ಆರ್. ಪೇಟೆ, ಮದ್ದೂರು ಮತ್ತು ನನ್ನ ಕ್ಷೇತ್ರ ಬಿಟ್ಟರೆ, ಉಳಿದ ಕಡೆ ಟಿಕೆಟ್‌ ಯಾರಿಗೆಂದು ಖಚಿತವಾಗಿದೆ. ಪುಟ್ಟೇಗೌಡ್ರಿಗೆ ಟಿಕೆಟ್‌ ಕೊಡಿ ಅಂದ್ರೆ ಹೇಗೆ? ಅಲ್ಲಿ ಸಿಟ್ಟಿಂಗ್ ಶಾಸಕರಿಗೆ ಟಿಕೆಟ್ ಅಂದಿದ್ದಾರಲ್ಲ’ ಎಂದರು.

ಪ್ರತಿಕ್ರಿಯಿಸಿ (+)