ಐಎಎಸ್‌ ಅಧಿಕಾರಿಗಳ ಮಾದರಿ ಮದುವೆ: ರಾಹುಲ್‌ ಪ್ರಶಂಸೆ

7

ಐಎಎಸ್‌ ಅಧಿಕಾರಿಗಳ ಮಾದರಿ ಮದುವೆ: ರಾಹುಲ್‌ ಪ್ರಶಂಸೆ

Published:
Updated:

ನವದೆಹಲಿ: ಧಾರ್ಮಿಕ ಅಸಹಿಷ್ಣುತೆ ನಡುವೆಯೇ ಐಎಎಸ್‌ನಲ್ಲಿ ಅಗ್ರಸ್ಥಾನ ಪಡೆದ ಟೀನಾ ದಾಬಿ ಹಾಗೂ ಅಥರ್‌ ಅಮೀರ್‌ ಉಲ್‌ ಶಫಿ ಖಾನ್‌ ಮದುವೆಯಾಗಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಟೀನಾ ಹಾಗೂ ಅಥರ್‌ ಅಮೀರ್‌ ಅವರು 2015ರ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಇವರು, ಭಾನುವಾರ ಜಮ್ಮು–ಕಾಶ್ಮೀರದ ಪಹಲ್‌ಗಾಂವ್‌ನಲ್ಲಿ ಮದುವೆಯಾಗಿದ್ದರು.

ಟ್ವೀಟ್‌ ಮೂಲಕ ಶುಭಕೋರಿದ ರಾಹುಲ್‌, ‘ನಿಮ್ಮಿಬ್ಬರ ಪ್ರೀತಿ ಮತ್ತಷ್ಟು ಬಲಗೊಳ್ಳಲಿ’ ಎಂದು ಹಾರೈಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry