ಮಂಗಳವಾರ, ಆಗಸ್ಟ್ 4, 2020
26 °C

ಕಲಬುರ್ಗಿ: ಕಳ್ಳರ ಕಾಲಿಗೆ ಗುಂಡೇಟು; ಕಾನ್‌ಸ್ಟೆಬಲ್‌ಗಳಿಗೂ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕಳ್ಳರ ಕಾಲಿಗೆ ಗುಂಡೇಟು; ಕಾನ್‌ಸ್ಟೆಬಲ್‌ಗಳಿಗೂ ಗಾಯ

ಕಲಬುರ್ಗಿ: ಪೊಲೀಸರು ಇಬ್ಬರು ದರೋಡೆಕೋರರ ಮೇಲೆ ನಗರದ ಹೊರವಲಯದ ಆಶ್ರಯ ಕಾಲೊನಿ ಬಳಿ ಗುರುವಾರ ಬೆಳಗಿನ ಜಾವ ಗುಂಡಿನ ದಾಳಿ ನಡೆಸಿದ್ದಾರೆ. ಗಾಯಗೊಂಡಿರುವ ಆರೋಪಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. 

ಆಳಂದ ಚೆಕ್ ಪೋಸ್ಟ್ ನಿವಾಸಿಗಳಾದ ಶೇಖರ್ ಮತ್ತು ಅಜೀಂ ಎಂಬುವರು ಕಳ್ಳತನಕ್ಕೆ ಬಂದಿದ್ದರು. ಈ ಕಾರ್ಯಾಚರಣೆಯಲ್ಲಿ ಕಾನ್‌ಸ್ಟೆಬಲ್‌ ಬಂದೇನವಾಜ್ ಹಾಗೂ ಭೀಮಾ‌ ನಾಯ್ಕ್ ಗಾಯಗೊಂಡಿದ್ದಾರೆ. ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳ್ಳತನಕ್ಕೆ ಬಂದ ಶೇಖರ್ ಮತ್ತು ಅಜೀಂ ಅವರ ಮೇಲೆ ಪಿಎಸ್ಐಗಳಾದ ಪರಶುರಾಮ ಮತ್ತು ವಾಹೀದ್ ಕೊತ್ವಾಲ್ ಗುಂಡು ಹಾರಿಸಿದ್ದಾರೆ. ಆಗ ಆರೋಪಿಗಳು ಪೊಲೀಸರ ಮೇಲೆ‌ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದರು.  

‘ಆರೋಪಿಗಳು ದರೋಡೆ, ಕೊಲೆ ಯತ್ನ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕಲಬುರ್ಗಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.