ಸೋಮವಾರ, ಆಗಸ್ಟ್ 10, 2020
26 °C

ಮಾಡಿ ಮತದಾನ; ಇರಲಿ ದೇಶಾಭಿಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಡಿ ಮತದಾನ; ಇರಲಿ ದೇಶಾಭಿಮಾನ

ನೂರಕ್ಕೆ ನೂರರಷ್ಟು ಜನ ಮತ ಚಲಾಯಿಸಿದರೆ ನಮ್ಮನ್ನು ಆಳುವವರ ಗುಣಮಟ್ಟ ಹೆಚ್ಚಾಗುತ್ತದೆ. ಜನರ ಆದೇಶ ಹೆಚ್ಚು ಸ್ಪಷ್ಟವಾಗಿರುತ್ತದೆ. ಅವ್ರು ಸರಿ ಇಲ್ಲ, ಇವ್ರು ಸರಿ ಇಲ್ಲ ಎಂದುಕೊಂಡು ಮತದಾನವನ್ನೇ ಮಾಡದಿರುವುದು ಸರಿಯಲ್ಲ. ಕನಿಷ್ಠ ‘ನಮಗೆ ಇವರಲ್ಲಿ ಯಾರೂ ಬೇಡ’ ಎಂಬುದನ್ನಾದರೂ ಮತದಾನದ ಮೂಲಕವೇ ಹೇಳಬೇಕು. ಈಗ ನಮ್ಮ ದೇಶದಲ್ಲಿ ಶೇಕಡ ಅರವತ್ತೋ ಎಪ್ಪತ್ತೋ ಜನರಷ್ಟೇ ಮತ ಚಲಾಯಿಸುತ್ತಿದ್ದಾರಂತೆ. ಮತ ಚಲಾಯಿಸುವವರ ಪ್ರಮಾಣ ಶೇಕಡ ನೂರು ಆಗಬೇಕು.

ಕಳೆದ ಸಲ ನಮ್ಮಲ್ಲಿ ಚೆನ್ನಾಗಿಯೇ ಮತದಾನ ಆಗಿದೆ. ಆದರೆ, ಈ ಸಲ ನೂರಕ್ಕೆ ನೂರರಷ್ಟು ಜನ ಮತ ಚಲಾಯಿಸುವಂತೆ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಶ್ರಮಿಸುತ್ತಿದೆ. ಈ ಜಾಗೃತಿಯ ಅಂಗವಾಗಿಯೇ ನಾನೊಂದು ಹಾಡನ್ನೂ ಬರೆದಿದ್ದೇನೆ. ‘ಮಾಡಿ ಮಾಡಿ ಮಾಡಿ ಮತದಾನ/ ಇರಲಿ ದೇಶದ ಮೇಲೆ ಅಭಿಮಾನ’ ಎಂಬುದು ಆ ಹಾಡಿನ ಟ್ಯಾಗ್ ಲೈನ್. ಈ ಹಾಡನ್ನು ಕೇಳಿ, ಒಂದಿಷ್ಟು ಜನರಿಗೆ ಮತದಾನ ಮಾಡಲು ಪ್ರೇರಣೆ ಸಿಕ್ಕರೆ ನಮ್ಮ ಶ್ರಮ ಸಾರ್ಥಕ.

-ಯೋಗರಾಜ್ ಭಟ್‌,

ಸಿನಿಮಾ ನಿರ್ದೇಶಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.