ಜಯದ ನಿರೀಕ್ಷೆಯಲ್ಲಿ ಬಿಎಫ್‌ಸಿ

7

ಜಯದ ನಿರೀಕ್ಷೆಯಲ್ಲಿ ಬಿಎಫ್‌ಸಿ

Published:
Updated:
ಜಯದ ನಿರೀಕ್ಷೆಯಲ್ಲಿ ಬಿಎಫ್‌ಸಿ

ಭುವನೇಶ್ವರ್‌: ಸೂಪರ್‌ಕಪ್‌ ಫುಟ್‌ ಬಾಲ್‌ ಟೂರ್ನಿಯುದ್ದಕ್ಕೂ ಅಮೋಘ ಆಟವಾಡಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಶುಕ್ರವಾರ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಇಲ್ಲಿನ ಕಳಿಂಗ್‌ ಕ್ರೀಡಾಂಗಣದಲ್ಲಿ ನೆರೋಕಾ ಎಫ್‌ಸಿ ತಂಡವನ್ನು ಎದುರಿಸಲಿದೆ.

‘ರಾಷ್ಟ್ರದ ಅತ್ಯುತ್ತಮ ತಂಡಗಳಲ್ಲಿ ನಮ್ಮದು ಒಂದು. ಆದ್ದರಿಂದ, ಎಲ್ಲ ರೀತಿಯ ಟೂರ್ನಿಗಳಲ್ಲೂ ನಾವು ಸ್ಪರ್ಧಿಸಬೇಕಿದೆ. ನೆರೋಕಾ ವಿರುದ್ಧದ ಪಂದ್ಯವು ಸುಲಭವಾಗಿರುವುದಿಲ್ಲ ಎಂಬ ಸಂಗತಿ ನಮಗೆ ಗೊತ್ತಿದೆ. ಐ–ಲೀಗ್‌ನಲ್ಲಿ ನಮಗೆ ಪ್ರಬಲ ಸೆಣಸಾಟ ನೀಡಿದ್ದ ತಂಡವು ತೀವ್ರ ಸವಾಲು ಒಡ್ಡಲಿದೆ. ಆದರೆ, ತಂಡವಾಗಿ ನಾವು ಸವಾಲು ಎದುರಿಸುತ್ತೇವೆ’ ಎಂದು ಬಿಎಫ್‌ಸಿ ತಂಡದ ಕೋಚ್‌ ಆಲ್ಬರ್ಟ್‌ ರೋಕಾ ಹೇಳಿದ್ದಾರೆ.

‘ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ನೆರೋಕಾ ತಂಡದ ಆಟ ಎಲ್ಲರ ಹುಬ್ಬೇರಿಸುವಂತಿತ್ತು. ಆದ್ದರಿಂದ ಎಚ್ಚರಿಕೆ ಆಟ ಮುಖ್ಯ. ಆ ತಂಡವು ಉತ್ತಮ ಆಟಗಾರರನ್ನು ಹೊಂದಿದೆ. ಹಾಗಾಗಿ ಪಂದ್ಯದ ಆರಂಭದಿಂದಲೂ ಬಿರುಸಿನ ಆಟವಾಡಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನೆರೋಕಾದ ಜೋಕಿಮ್‌ ಜೂನಿಯರ್‌ ಅವರ ನೇತೃತ್ವದ ಮುಂಚೂಣಿ ಆಟಗಾರರನ್ನು ಎದುರಿಸಲು ಬಿಎಫ್‌ಸಿಯ ರಕ್ಷಣಾ ಪಡೆಯು ಎಲ್ಲ ರೀತಿಯ ಯೋಜನೆ ಸಿದ್ಧಪಡಿಸಿಕೊಂಡಿದೆ’ ಎಂದು ಅವರು ತಿಳಿಸಿದ್ದಾರೆ.

ಆರಂಭ: ಸಂಜೆ 4.00

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌ ನೆಟ್‌ವರ್ಕ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry