ಪ್ರೆಸ್ಟೀಜ್‌ ಪ್ಯಾಂಥರ್ಸ್‌, ಮಲ್ನಾಡ್‌ ಟೈಗರ್ಸ್‌ಗೆ ಗೆಲುವು

7
ಟಿ–20 ಚಿಕ್ಕಮಗಳೂರು ಪ್ರೀಮಿಯರ್‌ ಲೀಗ್‌; 2ನೇ ದಿನ

ಪ್ರೆಸ್ಟೀಜ್‌ ಪ್ಯಾಂಥರ್ಸ್‌, ಮಲ್ನಾಡ್‌ ಟೈಗರ್ಸ್‌ಗೆ ಗೆಲುವು

Published:
Updated:

ಚಿಕ್ಕಮಗಳೂರು: ನಗರದ ಸುಭಾಷ್‌ ಚಂದ್ರಬೋಸ್‌ ಮೈದಾನದಲ್ಲಿ ರಾಣಾ ಸ್ಪೋರ್ಟ್ಸ್‌ ಕ್ಲಬ್‌ ವತಿಯಿಂದ ಆಯೋಜಿಸಿರುವ ಟಿ–20 ಚಿಕ್ಕ ಮಗಳೂರು ಪ್ರೀಮಿಯರ್‌ ಲೀಗ್‌ 3ನೇ ಆವೃತ್ತಿಯ ಎರಡನೇ ದಿನದ ಪಂದ್ಯಗಳು ಗುರುವಾರ ನಡೆದವು.

ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ಮೊದಲ ಪಂದ್ಯ ನಡೆಯಿತು. ಪ್ರೆಸ್ಟೀಜ್‌ ಪ್ಯಾಂಥರ್ಸ್‌ ಮತ್ತು ಜಾಗ್ವರ್‌ ಇಲೆವೆನ್ಸ್‌ ತಂಡಗಳ ನಡುವಿನ ಪಂದ್ಯದಲ್ಲಿ ಪ್ರೆಸ್ಟೀಜ್‌ ಪ್ಯಾಂಥರ್ಸ್‌ ತಂಡದವರು ಜಯ ಗಳಿಸಿದರು.

ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿ ಯಾಯಿತು. 14 ಓವರ್‌ಗಳ ರನ್‌ ರೇಟ್‌ ಆಧರಿಸಿ ಸೋಲು–ಗೆಲುವು ನಿರ್ಧರಿ ಸಲಾಯಿತು. ಮೊದಲು ಬ್ಯಾಟಿಂಗ್‌ ಮಾಡಿದ ಜಾಗ್ವರ್‌ ತಂಡದವರು 150 ರನ್‌ ಬಾರಿಸಿದರು. ಪ್ರೆಸ್ಟೀಜ್‌ ತಂಡದವರು 14 ಓವರ್‌ಗಳಲ್ಲಿ 110 ರನ್‌ ಕಲೆ ಹಾಕಿದರು.

ಮಧ್ಯಾಹ್ನದ ಪಂದ್ಯವು ಮಲ್ನಾಡ್‌ ಟೈಗರ್ಸ್‌ ಮತ್ತು ಮ್ಯಾಪ್ಸ್‌ ಸೂಪರ್‌ ಕಿಂಗ್ಸ್‌ ತಂಡಗಳ ನಡುವೆ ನಡೆಯಿತು. ಮಲ್ನಾಡ್‌ ಟೈಗರ್ಸ್‌ ತಂಡದವರು ಜಯ ಗಳಿಸಿದರು. ಮಲ್ನಾಡ್‌ ತಂಡದವರು 20 ಓವರ್‌ಗಳಲ್ಲಿ 160 ರನ್‌ ಬಾರಿಸಿದರು. ಮ್ಯಾಪ್ಸ್‌ ಸೂಪರ್‌ ಕಿಂಗ್ಸ್‌ ತಂಡದವರು 140 ರನ್‌ ಕಲೆ ಹಾಕಿದರು.

ಏ.13ರಂದು ಮಿಥುನ್‌ ವಾರಿಯರ್ಸ್‌ ಮತ್ತು ಇಲೆವೆನ್‌ ಜಾಗ್ವಾರ್ಸ್‌, ಮಲ್ನಾಡ್‌ ಟೈಗರ್ಸ್‌ ಮತ್ತು ಮಲ್ನಾಡ್‌ ರೇಂಜರ್ಸ್‌ ತಂಡಗಳ ನಡುವೆ ನಡೆಯಲಿದೆ ಎಂದು ಸಂಘಟನಕಾರ ಎಂ.ಎಸ್‌.ನಟರಾಜ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry