ಭಾರತ, ಚೀನಾ ಗಡಿ ವಿವಾದ: ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಮಾತುಕತೆ

7

ಭಾರತ, ಚೀನಾ ಗಡಿ ವಿವಾದ: ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಮಾತುಕತೆ

Published:
Updated:
ಭಾರತ, ಚೀನಾ ಗಡಿ ವಿವಾದ: ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಮಾತುಕತೆ

ಬೀಜಿಂಗ್: ಭಾರತ ಮತ್ತು ಚೀನಾ ಗಡಿ ವಿವಾದದ ಕುರಿತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಮತ್ತು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ಪಾಲಿಟ್‌ ಬ್ಯೂರೊ ಸದಸ್ಯ ಯಾಂಗ್ ಜೀಚಿ ಶುಕ್ರವಾರ ಚರ್ಚೆ ನಡೆಸಿದ್ದಾರೆ.

ದೋಕಲಾ ಬಿಕ್ಕಟ್ಟಿನ ನಂತರ ಭಾರತ–ಚೀನಾ ನಡುವೆ ನಡೆದ ಎರಡನೇ ಮಾತುಕತೆ ಇದಾಗಿದೆ. ಗಡಿವಿವಾದ ಪರಿಹರಿಸಿಕೊಳ್ಳಲು ಎರಡೂ ರಾಷ್ಟ್ರಗಳು ಪ್ರಯತ್ನಿಸುತ್ತಿವೆ.

ಭಾರತ–ಚೀನಾ ಗಡಿ ವಿವಾದ ಕುರಿತ ಮಾತುಕತೆಯ ವಿಶೇಷ ಪ್ರತಿನಿಧಿಗಳಾದ ಡೊಭಾಲ್‌ ಮತ್ತು ಯಾಂಗ್ ಮಾತುಕತೆ ನಡೆಸಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಪ್ರಕಟಣೆ ತಿಳಿಸಿದೆ. ಆದರೆ ಮಾತುಕತೆಯ ವಿವರಗಳನ್ನು ಅದು ಬಹಿರಂಗಪಡಿಸಿಲ್ಲ.

ಯಾಂಗ್‌, ಚೀನಾದ ವಿದೇಶಾಂಗ ವ್ಯವಹಾರಗಳ ಆಯೋಗದ ನಿರ್ದೇಶಕರೂ ಆಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry