ಬೆಂಗಳೂರು: ಭ್ರೂಣ ಹತ್ಯೆ ತಡೆದು. ಸಮಾಜದಲ್ಲಿರುವ ಲಿಂಗ ತಾರತಮ್ಯ ಮನೋಭಾವ ತೊಡೆದು ಹಾಕಿ. ಹೆಣ್ಣು ಮಗುಸ್ನೇಹಿ ವಾತಾವರಣ ನಿರ್ಮಿಸುವ ಆಶಯದಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 'ಬೇಟಿ ಬಚಾವೋ. ಬೇಟಿ ಪಢಾವೋ' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಹೀಗಿದ್ದರೂ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲಿಯೂ ಅತ್ಯಾಚಾರ ಪ್ರಕರಣಗಳಲ್ಲಿ ಬಿಜೆಪಿ ನಾಯಕರು ಭಾಗಿಯಾಗಿರುವುದು ಪಕ್ಷಕ್ಕೆ ಮುಜುಗರವುಂಟಾಗುವಂತೆ ಮಾಡಿದೆ. ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಬಂಧನವಾಗಿದೆ. ಕುಲದೀಪ್ ಸಿಂಗ್ ಸೆಂಗರ್ ಮಾತ್ರವಲ್ಲ ಇನ್ನೂ ಕೆಲವು ಅತ್ಯಾಚಾರ ಪ್ರಕರಣಗಳಲ್ಲಿ ಬಿಜೆಪಿ ನಾಯಕರು ಆರೋಪಿಗಳಾಗಿದ್ದಾರೆ. ಅಂಥಾ ಪ್ರಕರಣಗಳ ಮಾಹಿತಿ ಇಲ್ಲಿದೆ.

ದಿನಾಂಕ: ಫೆಬ್ರುವರಿ 10. 2017
ಎಲ್ಲಿ ?: ದೆಹಲಿ
ಆರೋಪ: ಲೈಂಗಿಕ ದೌರ್ಜನ್ಯ. ಅತ್ಯಾಚಾರ
ಆರೋಪಿ ಯಾರು?: ದೆಹಲಿಯ ಮಾಜಿ ಶಾಸಕ ವಿಜಯ್ ಜಾಲಿ (ಬಿಜೆಪಿ)
ಪ್ರಕರಣ: ದೆಹಲಿಯಲ್ಲಿ ಬಿಜೆಪಿಯ ಮಾಜಿ ಶಾಸಕ ವಿಜಯ್ ಜಾಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು. ಜಾಲಿ ಅವರು ಮಹಿಳೆಗೆ ಪಾನೀಯದಲ್ಲಿ ಮಾದಕ ಪದಾರ್ಥ ಬೆರಿಸಿ ಕುಡಿಸಿದ ನಂತರ ಲೈಂಗಿಕ ದೌರ್ಜನ್ಯವೆಸಗಿದ್ದರು. ಫೆಬ್ರುವರಿ 10ರಂದು ಗುರುಗ್ರಾಮದ ಅಪ್ನೊ ಘರ್ ರೆಸಾರ್ಟ್‍ನಲ್ಲಿ ದೌರ್ಜನ್ಯ ನಡೆದಿತ್ತು ಎಂದು ಫೆಬ್ರುವರಿ 21ರಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.
ಮಹಿಳೆಯ ಆರೋಪದ ಮೇರೆಗೆ ಜಾಲಿ ವಿರುದ್ಧ ಭಾರತೀಯ ದಂಡ ಸಂಹಿತೆ 376 (ಅತ್ಯಾಚಾರ).328 (ವಿಷ. ಇನ್ನಿತರ ಪದಾರ್ಥದಿಂದ ನೋವುಂಟುಮಾಡುವುದು). 506 (ಅಪರಾಧದ ಬೆದರಿಕೆ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಾಲಿ ಹೇಳಿದ್ದೇನು?
2003 -200ರ ಅವಧಿಯಲ್ಲಿ ಶಾಸಕರಾಗಿದ್ದ ಜಾಲಿ. ಈ ಆರೋಪಗಳೆಲ್ಲವೂ ನಿರಾಧಾರ ಎಂದು ವಾದಿಸಿದ್ದರು. ಆರೋಪ ಹೊರಿಸಿರುವ ಮಹಿಳೆ ತನ್ನನ್ನು ಬ್ಲಾಕ್ ಮೇಲ್ ಮಾಡಿ. ಸುಲಿಗೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ತನ್ನ ರಾಜಕೀಯ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಹುನ್ನಾರ ಇದು ಎಂದು ಜಾಲಿ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿತ್ತು.

ಜಾಲಿ ವಿರುದ್ಧ ಎಫ್‍ಐಆರ್
ಐಪಿಸಿ 384 (ಬಲವಂತ ಮಾಡುವುದು). 120 ಬಿ (ಅಪರಾಧ ಸಂಚು) ಸೆಕ್ಷನ್ ಅಡಿಯಲ್ಲಿ ಖಿಡ್ಕಿ ದೌಲಾ ಪೊಲೀಸ್ ಠಾಣೆಯಲ್ಲಿ ಜಾಲಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

ದಿನಾಂಕ: ಫೆಬ್ರುವರಿ 8. 2017
ಎಲ್ಲಿ ?: ಗುಜರಾತ್‍ನ ಕಚ್ ಜಿಲ್ಲೆ
ಆರೋಪ: 24ರ ಹರೆಯದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಆರೋಪಿ ಯಾರು?: ಸಾಮೂಹಿಕ ಅತ್ಯಾಚಾರವೆಸಗಿದ 10 ಆರೋಪಿಗಳಲ್ಲಿ ನಾಲ್ವರು ಬಿಜೆಪಿ ನಾಯಕರು
ಪ್ರಕರಣ: ಗುಜರಾತ್‌ನ ಕಚ್ ಜಿಲ್ಲೆಯಲ್ಲಿ 24ರ ಹರೆಯದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಪ್ರಕರಣದ 10 ಮಂದಿ ಆರೋಪಿಗಳಲ್ಲಿ ನಾಲ್ವರು ಬಿಜೆಪಿ ನಾಯಕರಾಗಿದ್ದಾರೆ. ಸಾಮೂಹಿಕ ಅತ್ಯಾಚಾರದ ವಿಡಿಯೊ ಚಿತ್ರೀಕರಣ ಮಾಡಿದ ನಂತರ ಆರೋಪಿಗಳನ್ನು ತನ್ನನ್ನು ಬ್ಲಾಕ್ ಮೇಲ್ ಮಾಡಿದ್ದು ಮಾತ್ರವಲ್ಲದೆ ವೇಶ್ಯಾವಾಟಿಕೆ ಮಾಡುವಂತೆ ಒತ್ತಾಯಿಸಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಕಚ್ ಜಿಲ್ಲೆಯ ನಾಲಿಯಾ ನಗರದಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಈ ವ್ಯಕ್ತಿಗಳು ಹಲವಾರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ವೇಶ್ಯಾವಾಟಿಕೆಗೆ ದೂಡಿದ್ದಾರೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಬಿಜೆಪಿ ನೇತಾರರಾದ ಶಾಂತಿಲಾಲ್ ಸೋಲಂಕಿ. ಗೋವಿಂದ್ ಪರುಮಲಾನಿ. ಅಜಿತ್ ರಾಂವಾನಿ ಮತ್ತು ವಸಂತ್ ಬಾನುಶಾಲಿ ಅವರನ್ನು ಗುಜರಾತಿನ ಬಿಜೆಪಿ ಪಕ್ಷದಿಂದ ಅಮಾನತು ಮಾಡಲಾಗಿತ್ತು.

ದಿನಾಂಕ: ಜೂನ್ 17, 2016
ಎಲ್ಲಿ ?: ವಡೋದರಾ. ಗುಜರಾತ್
ಆರೋಪ: ಅತ್ಯಾಚಾರ
ಆರೋಪಿ ಯಾರು?: ಗುಜರಾತ್‍ನ ಬಿಜೆಪಿ ನಾಯಕ ಜಯೇಶ್ ಪಟೇಲ್
ಪ್ರಕರಣ: ಗುಜರಾತಿನ ಬಿಜೆಪಿ ನಾಯಕ ಮತ್ತು ವಡೋದರಾದಲ್ಲಿರುವ ಪಾರುಲ್ ಯುನಿವರ್ಸಿಟಿಯ ಸಂಸ್ಥಾಪಕ ಅಧ್ಯಕ್ಷ ಜಯೇಶ್ ಪಟೇಲ್ (66) 22ರ ಹರೆಯದ ನರ್ಸಿಂಗ್ ವಿದ್ಯಾರ್ಥಿ ಮೇಲೆ ಅತ್ಯಾಚಾರವೆಸಗಿದ್ದಾರೆ.
ಮಹಿಳೆಯರ ಹಾಸ್ಟೆಲ್ ಪಕ್ಕದಲ್ಲಿರುವ ಮನೆಯೊಂದರಲ್ಲಿ ಜೂನ್ 17 ಶುಕ್ರವಾರ ಸಂಜೆ ಜಯೇಶ್ ತನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ವಿದ್ಯಾರ್ಥಿ ದೂರಿದ್ದಾಳೆ. ಮಹಿಳಾ ಹಾಸ್ಟೆಲ್‍ನ ಮುಖ್ಯಾಧಿಕಾರಿ ಭಾವನಾ ಪಟೇಲ್ ಅವರು ತನ್ನನ್ನು ಆ ಮನೆಗೆ ಕರೆದುಕೊಂಡು ಹೋಗಿದ್ದರು ಎಂದು ಸಂತ್ರಸ್ತೆ ಹೇಳಿದ್ದಾಳೆ. ಅತ್ಯಾಚಾರದ ಬಗ್ಗೆ ಬಾಯಿ ಬಿಟ್ಟರೆ ಕಾಲೇಜಿನಿಂದ ಹೊರಹಾಕಲಾಗುವುದು ಎಂದು ಜಯೇಶ್ ಬೆದರಿಕೆಯೊಡ್ಡಿದ್ದರು ಎಂದು ವಿದ್ಯಾರ್ಥಿನಿ ದೂರಿರುವುದಾಗಿ ವಡೋದರಾ (ಗ್ರಾಮೀಣ) ಎಸ್‍ಪಿ ಸೌರಭ್ ತೊಲಂಬಿಯಾ ಹೇಳಿದ್ದಾರೆ. ವಿದ್ಯಾರ್ಥಿನಿ ದೂರಿನ ಮೇರೆಗೆ ಜಯೇಶ್ ಮತ್ತು ಭಾವನಾ ಪಟೇಲ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿತ್ತು.

ದಿನಾಂಕ: ಜನವರಿ 3, ಜನವರಿ 4, 2015
ಎಲ್ಲಿ ?: ಫರೀದಾಬಾದ್
ಆರೋಪ: ಮಾದಕ ವಸ್ತು ಬೆರಿಸಿದ ಪಾನೀಯ ನೀಡಿ ಮಹಿಳೆಯ ಮೇಲೆ ಅತ್ಯಾಚಾರ
ಆರೋಪಿ ಯಾರು?: ಗುರುಗ್ರಾಮದ ಬಿಜೆಪಿ ಶಾಸಕ ಉಮೇಶ್ ಅಗ್ರವಾಲ್ ಮತ್ತು ಇತರರು
ಪ್ರಕರಣ:  ಫರೀದಾಬಾದ್‍ನ ಹೋಟೆಲ್‍ವೊಂದರಲ್ಲಿ 30ರ ಹರೆಯದ ಮಹಿಳೆಯೊಬ್ಬರನ್ನು ಗುರುಗ್ರಾಮದ ಬಿಜೆಪಿ ಶಾಸಕ ಉಮೇಶ್ ಅಗ್ರವಾಲ್ ಮತ್ತು ಸಂದೀಪ್ ಲುತಾರ ಅತ್ಯಾಚಾರವೆಸಗಿದ್ದರು. ಮಹಿಳೆಗೆ ಮಾದಕ ವಸ್ತು ಬೆರೆಸಿದ ಪಾನೀಯ ನೀಡಿ ರೇಖಾ ರಾಣಿ ಎಂಬ ಮಹಿಳೆಯೊಬ್ಬರ ಸಹಾಯದಿಂದ ಅತ್ಯಾಚಾರವೆಸಗಿದ್ದರು.
ರೇಖಾ ರಾಣಿ ಅವರು ಮಹಿಳೆಯನ್ನು ದೆಹಲಿಯಿಂದ ಕರೆದುಕೊಂಡು ಬಂದು ಅಗರ್‍ವಾಲ್‍ಗೆ ಒಪ್ಪಿಸಿದ್ದರು. ಅಗರ್‍ವಾಲ್ ತಂಗಿದ್ದ ಹೋಟೆಲ್ ರೂಮಿನಲ್ಲಿ ಮಾದಕ ವಸ್ತು ಬೆರೆಸಿದ ಪಾನೀಯ ನೀಡಿ. ಪ್ರಜ್ಞೆ ತಪ್ಪಿದ ನಂತರ ಅಗರ್‍ವಾಲ್ ಮತ್ತು ಲುತಾರಾ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಜನವರಿ 5ರಂದು ಎಫ್‍ಐಅಆರ್ ದಾಖಲಾಗಿತ್ತು. ಇದಾದನಂತರ ಮಹಿಳೆ ತಮ್ಮ ದೂರನ್ನು ವಾಪಸ್ ಪಡೆದಿದ್ದಾರೆ ಎಂದು ಅಗರ್‍ವಾಲ್ ಹೇಳಿದ್ದರು.

ದಿನಾಂಕ: ನ. 26, 2009
ಎಲ್ಲಿ ?: ಶಿವಮೊಗ್ಗ, ಕರ್ನಾಟಕ
ಆರೋಪ: ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ
ಆರೋಪಿ ಯಾರು?: ಮಾಜಿ ಸಚಿವ ಹರತಾಳು ಹಾಲಪ್ಪ
ಪ್ರಕರಣ: 2009ರ ಅವಧಿಯಲ್ಲಿ ಬಿಜೆಪಿ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಹರತಾಳು ಹಾಲಪ್ಪ ಅವರು ವಿನೋಬಾ ನಗರದ ಕಲ್ಲಹಳ್ಳಿಯಲ್ಲಿರುವ ಸ್ನೇಹಿತನ ಪತ್ನಿ ಮೇಲೆ 2009 ನವೆಂಬರ್ 26ರಂದು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಸ್ನೇಹಿತನ ಭೇಟಿಗೆ ನ. 26. 2009ರಂದು ನಗರದ ವಿನೋಬನಗರದ ಅವರ ಮನೆಗೆ ಬಂದಿದ್ದ ಹಾಲಪ್ಪ ಅತ್ಯಾಚಾರ ಎಸಗಿದ್ದರು ಎಂದು ಮೇ 2. 2010ರಂದು ರಾಜ್ಯಪಾಲರು ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಲಾಗಿತ್ತು. ಸಂತ್ರಸ್ತೆ ಶಿವಮೊಗ್ಗದ ವಿನೋಬನಗರ ಠಾಣೆಯಲ್ಲಿ ಹಾಲಪ್ಪ ವಿರುದ್ಧ ದೂರು ನೀಡಿದ್ದರು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ಪ್ರಕರಣ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು. ಸರ್ಕಾರ ಸಾಕಷ್ಟು ಮುಜುಗರಕ್ಕೆ ಒಳಗಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಏಳೂವರೆ ವರ್ಷದ ಬಳಿಕ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಕಾರಣ ಆಗಸ್ಟ್ 17, 2017ರಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಹಾಲಪ್ಪ ಅವರನ್ನು ಆರೋಪಮುಕ್ತಗೊಳಿಸಿತ್ತು.

ದಿನಾಂಕ:  ಮೇ. 10. 2010
ಎಲ್ಲಿ ?: ಚಿಕ್ಕಮಗಳೂರು
ಆರೋಪ: ಅತ್ಯಾಚಾರ
ಆರೋಪಿ ಯಾರು?:  ಶೃಂಗೇರಿ ಶಾಸಕ. ಡಿ.ಎನ್. ಜೀವರಾಜ್
ಪ್ರಕರಣ:  2010ರ ಮೇ 10ರಂದು ಶಾಸಕ ಡಿ.ಎನ್.ಜೀವರಾಜ್. ತಾಲೂಕು ಪಂಚಾಯಿತಿ ಅಧ್ಯಕ್ಷ ಜಿ.ಜೆ.ನಾಗರಾಜ್. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್.ಆಶಿಶ್‌ಕುಮಾರ್ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ.’’ ಎಂದು ಆರೋಪಿಸಿ ಮಡಬೂರು ಕೆಸಕಿ ಗ್ರಾಮದ ಯುವತಿ ದೂರು ನೀಡಿದ್ದರು. ದೂರಿನನ್ವಯ ಡಿ.ಎನ್.ಜೀವರಾಜ್ ವಿರುದ್ಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಯುವತಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಅಪಹರಣ. ಅತ್ಯಾಚಾರ ಹಾಗೂ ಪ್ರಾಣ ಬೆದರಿಕೆ ಕೇಸು ದಾಖಲಿಸಿಕೊಂಡಿದ್ದರು.

ದಿನಾಂಕ: 2013, ಮೇ 9
ಎಲ್ಲಿ ?: ಮುಂಬೈ
ಆರೋಪ: ಅತ್ಯಾಚಾರ
ಆರೋಪಿ ಯಾರು?: ಮಹಾರಾಷ್ಟ್ರದ ಬಿಜೆಪಿ ನಾಯಕ ಮಧು ಚವಾಣ್
ಪ್ರಕರಣ : ಮದುವೆಯಾಗುವುದಾಗಿ ಭರವಸೆ ನೀಡಿ ಬಿಜೆಪಿ ಪಕ್ಷದ ಮಹಿಳಾ ನಾಯಕಿಯೊಬ್ಬರೊಂದಿಗೆ ದೈಹಿಕ ಸಂಪರ್ಕವಿರಿಸಿ ವಂಚಿಸಿದ ಆರೋಪದಲ್ಲಿ ಬಿಜೆಪಿಯ ಹಿರಿಯ ನಾಯಕ ಮತ್ತು ಮಹಾರಾಷ್ಟ್ರದ ಬಿಜೆಪಿ ವಕ್ತಾಪ ಮಧು ಚೌಹಾನ್ ವಿರುದ್ಧ ಕಾಲಾ ಚೌಕಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿತ್ತು.
ಬಿಜೆಪಿ ಮಾಜಿ ಶಾಸಕರಾಗಿದ್ದ ಮಧು 20 ವರ್ಷಗಳ ಕಾಲ ತಮ್ಮ ಸಹೋದ್ಯೋಗಿ. ಮಹಿಳಾ ನಾಯಕಿ ಜತೆ ಸಂಬಂಧಹೊಂದಿದ್ದರು ಎನ್ನಲಾಗಿದೆ. 1993ರಿಂದ ತಾನು ಮಧು ಜತೆ ಸಂಬಂಧಹೊಂದಿದ್ದು. ಅವರು ಮದುವೆಯಾಗುವುದಾಗಿ ಭರವಸೆ ನೀಡಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾರೆ. ದೂರು ನೀಡಿದ ವೇಳೆ ಸಂತ್ರಸ್ತೆ ಬಿಜೆಪಿ ಪಕ್ಷ ತೊರೆದು ಮಹಾರಾಷ್ಟ್ರದ ಪ್ರಾದೇಶಿಕ ಪಕ್ಷವೊಂದನ್ನು ಸೇರಿದ್ದರು.
ಮಹಿಳೆಯ ದೂರಿನ ಮೇರೆಗೆ ಮುಂಬೈ ಪೊಲೀಸರು ಚವಾನ್ ವಿರುದ್ದ ಐಪಿಸಿ 376 (ಅತ್ಯಾಚಾರ) ಪ್ರಕರಣ ದಾಖಲಿಸಿದ್ದರು.

ದಿನಾಂಕ: ಮಾರ್ಚ್ 1, 2017
ಎಲ್ಲಿ ?: ಮಧ್ಯಪ್ರದೇಶ
ಆರೋಪ: ದಲಿತ ಮಹಿಳೆಯ ಮೇಲೆ ಅತ್ಯಾಚಾರ
ಆರೋಪಿ ಯಾರು?: ಬಿಜೆಪಿ ನಾಯಕ ಭೋಜ್‌ಪಾಲ್ ಸಿಂಗ್ ಜಾಡನ್
ಪ್ರಕರಣ: ಮಧ್ಯಪ್ರದೇಶದ ಮೊರೆನಾ ಎಂಬಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಸಹಾಯ ಮಾಡುವುದಾಗಿ ಭರವಸೆ ನೀಡಿ ಅಲ್ಲಿನ ಸ್ಥಳೀಯ ಬಿಜೆಪಿ ಮುಖಂಡ ಭೋಜ್‌ಪಾಲ್ ಸಿಂಗ್ ಜಾಡನ್ ಮತ್ತು ಆತನ ಇಬ್ಬರು ಸಹಚರರು ದಲಿತ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು.
ಮೊರೆನಾದ ಸುಮಾವಲಿ ಗ್ರಾಮದ 35ರ ಹರೆಯದ ಮಹಿಳೆ ಬಿಪಿಎಲ್ ಕಾರ್ಡ್ ಪಡೆಯಲು ಸಹಾಯ ಬೇಡಿದ್ದರು. ಅದೇ ಗ್ರಾಮದಲ್ಲಿ ರೇಶನ್ ಅಂಗಡಿ ನಡೆಸುವ ಸೊಸೈಟಿಯ ಅಧ್ಯಕ್ಷರಾದ ಜಾಡನ್. ಬಿಪಿಎಲ್ ಕಾರ್ಡ್ ಪಡೆಯಲು ಹೆಸರು ನೋಂದಣಿ ಮಾಡುವಂತೆ ದಲಿತ ಮಹಿಳೆಗೆ ಹೇಳಿದ್ದರು. ಅದೊಂದು ಭಾನುವಾರ ಮಹಿಳೆ ಜೋಡನ್ ಅವರನ್ನು ಭೇಟಿ ಮಾಡಲು ಕಚೇರಿಗೆ ಹೋದಾಗ ಆಕೆಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಅತ್ಯಾಚಾರವೆಸಗಿದ್ದಾರೆ. ಜೋಡನ್ ಜತೆ ಆತನ ಇಬ್ಬರು ಸಹಚರರು ಕೂಡಾ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರದ ವಿಷಯವನ್ನು ಹೊರಗೆ ಹೇಳಿದರೆ ಕೊಲ್ಲುವುದಾಗಿ ಜೋಡನ್ ಬೆದರಿಕೆಯೊಡ್ಡಿದ್ದರು. ಅತ್ಯಾಚಾರ ಸಂತ್ರಸ್ತೆ ಈ ವಿಷಯವನ್ನು ತನ್ನ ಪತಿಗೆ ತಿಳಿಸಿದ್ದು. ಅನಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ದಿನಾಂಕ: ಜನವರಿ 20, 2017
ಎಲ್ಲಿ ?: ಮುಂಬೈ
ಆರೋಪ: ಅತ್ಯಾಚಾರ
ಆರೋಪಿ ಯಾರು?: ಬಿಜೆಪಿ ಕಾರ್ಪೊರೇಟರ್ ಅನಿಲ್ ಬೋಂಸ್ಲೆ
ಪ್ರಕರಣ: 44ರ ಹರೆಯದ ವಿವಾಹಿತ ಮಹಿಳೆಯನ್ನು ಅತ್ಯಾಚಾರ ಮಾಡಿ ಮತ್ತು ಆಕೆಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ ಮುಂಬೈನ ಕಶ್ಮೀರಾದ ಕಾರ್ಪೊರೇಟರ್ ಅನಿಲ್ ಬೋಂಸ್ಲೆ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಿಜೆಪಿಯ ಮೀರಾ-ಭಯಂದರ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಿಲ್. ಮೀರಾ ಭಯಾಂದರ್ ಮುನ್ಸಿಪಲ್ ಕಾರ್ಪೊರೇಷನ್ (ಎಂಬಿಎಂಸಿ)ಯ ವಾರ್ಡ್ ಕಮಿಟಿ ಅಧ್ಯಕ್ಷರಾಗಿದ್ದರು.
ಮಲೇಷ್ಯಾದಲ್ಲಿ ಕೆಲಸದಲ್ಲಿದ್ದ ತನ್ನ ಪತಿಯಿಂದ ವಿಚ್ಛೇದನ ಪಡೆಯಲು ಹೋರಾಟ ಮಾಡುತ್ತಿದ್ದ ವೇಳೆ 2012ರಲ್ಲಿ ಬೋಂಸ್ಲೆ ಅವರ ಪರಿಚಯವಾಗಿತ್ತು. ಆನಂತರ ಬೋಂಸ್ಲೆ ತನ್ನೊಂದಿಗೆ ಬಲವಂತದ ಲೈಂಗಿಕ ಸಂಪರ್ಕ ನಡೆಸಿ ಅದನ್ನು ವಿಡಿಯೊ ಚಿತ್ರೀಕರಣ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ವಾಸೈನಲ್ಲಿರುವ ಹೋಟೆಲ್‍ವೊಂದರಲ್ಲಿ ಆತ ತನ್ನ ಮೇಲೆ ಅತ್ಯಾಚಾರ ಮಾಡಿದ್ದರು. ಈ ವಿಷಯ ಬಹಿರಂಗ ಪಡಿಸಿದರೆ ನನ್ನ ಮಗನನ್ನು ಕೊಲ್ಲುವುದಾಗಿ ಮತ್ತು ತನ್ನ ಬ್ಯೂಟಿ ಪಾರ್ಲರ್‍ನ್ನು ಮುಚ್ಚಿಸುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ಸಂತ್ರಸ್ತೆ ದೂರು ನೀಡಿದ್ದರು.
ದೂರಿನ ಮೇರೆಗೆ ಪೊಲೀಸರು ಬೋಂಸ್ಲೆ ವಿರುದ್ಧ ಐಪಿಸಿ 376( ಅತ್ಯಾಚಾರ), ಅಸಹಜ ಲೈಂಗಿಕ ಕ್ರಿಯೆ (377) ಸೆಕ್ಷನ್ ಅಡಿಯಲ್ಲಿ ಕೇಸು ದಾಖಲಿಸಿದ್ದರು.

ದಿನಾಂಕ: ಡಿಸೆಂಬರ್ 15. 2016
ಎಲ್ಲಿ ?: ಭೋಪಾಲ್. ಮಧ್ಯ ಪ್ರದೇಶ
ಆರೋಪ: ಸಾಮೂಹಿಕ ಅತ್ಯಾಚಾರ
ಆರೋಪಿ ಯಾರು?: ಸ್ಥಳೀಯ ಬಿಜೆಪಿ ನಾಯಕ
ಪ್ರಕರಣ: ಚುಡಾಯಿಸಿದ್ದಕ್ಕಾಗಿ ಸ್ಥಳೀಯ ಬಿಜೆಪಿ ನಾಯಕನ ವಿರುದ್ಧ ಬುಡಕಟ್ಟು ಜನಾಂಗದ ಹೆಣ್ಣುಮಗಳೊಬ್ಬಳು ಪೊಲೀಸರಿಗೆ ದೂರು ನೀಡಿದ್ದಳು. ಈ ದೂರನ್ನು ವಾಪಸ್ ಪಡೆಯಲು ಒಪ್ಪದೇ ಇದ್ದಾಗ ಬಿಜೆಪಿ ನಾಯಕ ಮತ್ತು ಆತನ ಐವರು ಸಹಚರರು ಆ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು.
ಇಲ್ಲಿನ ಬೈತುಲ್ ಜಿಲ್ಲೆಯ ಆಮ್ಲಾ ಎಂಬಲ್ಲಿ ಈ ಪ್ರಕರಣ ನಡೆದಿತ್ತು. ಬಾಲಕಿಯನ್ನು ಕಾಡಿನೊಳಗೆ ಎಳೆದೊಯ್ದ 6 ದುಷ್ಕರ್ಮಿಗಳು 36 ಗಂಟೆಗಳ ಕಾಲ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಚುಡಾಯಿಸಿದ ಬಗ್ಗೆ ದೂರು ವಾಪಸ್ ಪಡೆದುಕೊಳ್ಳುವಂತೆ ಒತ್ತಾಯಿಸಿದ ದುಷ್ಕರ್ಮಿಗಳು ಅದಕ್ಕೆ ಒಪ್ಪದೇ ಇದ್ದಾಗ ತನ್ನ ಮೇಲೆ ಹಲ್ಲೆ ನಡೆದ್ದಾರೆ. ಆನಂತರ 6 ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನನ್ನ ಪ್ರಜ್ಞೆ ತಪ್ಪಿದಾಗ ನನ್ನನ್ನು ಕಾಡಿನಲ್ಲಿ ಬಿಟ್ಟು ತಲೆಮರೆಸಿಕೊಂಡಿದ್ದಾರೆ ಎಂದು ಬಾಲಕಿ ದೂರು ನೀಡಿದ್ದಳು.

ದಿನಾಂಕ: ಜುಲೈ 09, 2013
ಎಲ್ಲಿ ?: ಭೋಪಾಲ್
ಆರೋಪ: ಸಲಿಂಗ ಕಾಮ. ದೌರ್ಜನ್ಯ
ಆರೋಪಿ ಯಾರು?: ಮಧ್ಯಪ್ರದೇಶದ ಮಾಜಿ ಹಣಕಾಸು ಸಚಿವ ರಾಘವ್ ಜಿ

ಪ್ರಕರಣ: ರಾಘವ್ ಜಿ ತನ್ನನ್ನು ಸಲಿಂಗ ಕಾಮಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಮನೆಗೆಲಸದವ ಹಾಗೂ ಸಹಾಯಕನಾದ ರಾಜಕುಮಾರ್ ಡಾಂಗಿ ಎಂಬಾತ ಪೊಲೀಸರಿಗೆ ದೂರು ಸಲ್ಲಿಸಿದ್ದನು. ಅಲ್ಲದೇ ಪ್ರಕರಣ ಸಂಬಂಧ ಸಿ.ಡಿಯನ್ನು ಬಿಡುಗಡೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಮಾಜಿ ಹಣಕಾಸು ಸಚಿವ ರಾಘವ್ ಜಿ ಅವರನ್ನು ಭೋಪಾಲ್ ನಲ್ಲಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವ್ ಜಿ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರು ತಲೆಮರೆಸಿಕೊಂಡಿದ್ದರು. ನಂತರ ಪೊಲೀಸರು ಸಚಿವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.
2004ರಿಂದ 2013ರವರೆಗೆ ಸತತ 10 ವರ್ಷಗಳವರೆಗೆ ರಾಘವ್ ಜಿ ಮಧ್ಯಪ್ರದೇಶ ಬಜೆಟ್ ಮಂಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ದಿನಾಂಕ: ಮೇ 29. 2016
ಎಲ್ಲಿ ?: ಅಹಮದಾಬಾದ್
ಆರೋಪ: ಬಾಲಕಿಗೆ ಲೈಂಗಿಕ ಕಿರುಕುಳ
ಆರೋಪಿ ಯಾರು?: ಬಿಜೆಪಿ ನಾಯಕ ಅಶೋಕ್ ಮಕ್ವಾನಾ

ಪ್ರಕರಣ: ಗೋವಾದಿಂದ ಅಹಮದಾಬಾದ್‌ಗೆ ಹೋಗುತ್ತಿದ್ದ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಮೇ 29ರಂದು ಪ್ರಯಾಣಿಸುತ್ತಿದ್ದ 13ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಗಾಂಧಿ ನಗರ ಮೂಲದ ಬಿಜೆಪಿ ನಾಯಕ ಅಶೋಕ್ ಮಕ್ವಾನಾನನ್ನು ಸರ್ದಾರ್‌ನಗರ ಪೊಲೀಸರು ಬಂಧಿಸಿದ್ದರು
ಶನಿವಾರ ಮಧ್ಯರಾತ್ರಿ ವಿಮಾನ ಹತ್ತಿದ್ದ ಬಾಲಕಿ ಭಾನುವಾರ ಬೆಳಗ್ಗೆ ಗಾಂಧಿನಗರದಲ್ಲಿ ಇಳಿದಿದ್ದಳು. ರಾತ್ರಿ ಪಕ್ಕದಲ್ಲಿ ಕುಳಿತ ವ್ಯಕ್ತಿ ತನ್ನ ಜತೆ ಅಶ್ಲೀಲ. ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದ ಎಂದು ಮನೆಯಲ್ಲಿ ತಿಳಿಸಿದ ಬಳಿಕ ಮಕ್ವಾನ ವಿರುದ್ಧ ಕೇಸು ದಾಖಲಾಗಿತ್ತು.

ದಿನಾಂಕ: ಆಗಸ್ಟ್ 22, 2014
ಎಲ್ಲಿ ?: ಮಧ್ಯಪ್ರದೇಶ
ಆರೋಪ: ಅತ್ಯಾಚಾರ. ಅಪ್ರಾಪ್ತೆಯ ಕಳ್ಳಸಾಗಾಣಿಕೆ
ಆರೋಪಿ ಯಾರು?: ಬಿಜೆಪಿ ನಾಯಕ
ಪ್ರಕರಣ: ಅಸ್ಸಾಂನಿಂದ ಬಾಲಕಿಯೊಬ್ಬಳನ್ನು ಕಳ್ಳಸಾಗಾಣಿಕೆ ಮಾಡಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಮಧ್ಯಪ್ರದೇಶದ ಬಿಜೆಪಿ ನಾಯಕ ಮತ್ತು ಇತರ ಐದು ಮಂದಿ ವಿರುದ್ದ ಕೇಸು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಐಪಿಸಿ 372(ಅತ್ಯಾಚಾರ) , 373 (ಕಳ್ಳಸಾಗಾಣಿಕೆ) ಸೆಕ್ಷನ್ ಅಡಿಯಲ್ಲಿ ಕೇಸು ದಾಖಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.