ಶುಕ್ರವಾರ, ಡಿಸೆಂಬರ್ 13, 2019
19 °C

₹ 621 ಕೋಟಿ ವಂಚನೆ: ಯುಕೊ ಬ್ಯಾಂಕ್‌ ಸಿಎಂಡಿ ವಿರುದ್ಧ ಪ್ರಕರಣ

ಪಿಟಿಐ Updated:

ಅಕ್ಷರ ಗಾತ್ರ : | |

₹ 621 ಕೋಟಿ ವಂಚನೆ: ಯುಕೊ ಬ್ಯಾಂಕ್‌ ಸಿಎಂಡಿ ವಿರುದ್ಧ ಪ್ರಕರಣ

ನವದೆಹಲಿ: ₹ 621 ಕೋಟಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಯುಕೊ ಬ್ಯಾಂಕ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಅರುಣ್ ಕೌಲ್ ಅವರ ಮೇಲೆ ಸಿಬಿಐ ಶನಿವಾರ ಪ್ರಕರಣ ದಾಖಲಿಸಿದೆ.

‘ಎರಾ ಎಂಜಿನಿಯರಿಂಗ್ ಇನ್‌ಫ್ರಾ ಇಂಡಿಯಾ ಲಿಮಿಟೆಡ್‌ ಹಾಗೂ ಅದರ ಸಿಎಂಡಿ ಹೇಮ್‌ ಸಿಂಗ್ ಭರಣ, ಲೆಕ್ಕ ಪರಿಶೋಧಕರಾದ ಪಂಕಜ್ ಜೈನ್ ಹಾಗೂ ವಂದನಾ ಶಾರದಾ, ಆಲ್ಟಿಯಸ್ ಫಿನ್‌ಸರ್ವ್ ಪ್ರೈವೇಟ್ ಲಿಮಿಟೆಡ್‌ನ ಪವನ್ ಬನ್ಸಲ್ ಹಾಗೂ ಇತರರ ಮೇಲೂ ಪ್ರಕರಣ ದಾಖಲಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಂದಾಜು ₹ 621 ಕೋಟಿ ಸಾಲವನ್ನು ಅನ್ಯ ಉದ್ದೇಶಕ್ಕೆ ಬಳಸಿ, ವಂಚಿಸಿದ್ದಾರೆ ಎಂದು ಇವರ ಮೇಲೆ ಕ್ರಿಮಿನಲ್ ಪಿತೂರಿ ಆರೋಪ ಹೊರಿಸಲಾಗಿದೆ. ಹಗರಣದ ಸಂಬಂಧ ದೆಹಲಿ, ಮುಂಬೈನಲ್ಲಿ ಸಿಬಿಐ ಶೋಧ ನಡೆಸಿದೆ.

ಪ್ರತಿಕ್ರಿಯಿಸಿ (+)