ಸಂವಿಧಾನ ಶಿಲ್ಪಿಗೆ ಅಂಬೇಡ್ಕರ್‌ಗೆ ವಿವಿಧೆಡೆ ನಮನ

ಬುಧವಾರ, ಮಾರ್ಚ್ 27, 2019
22 °C

ಸಂವಿಧಾನ ಶಿಲ್ಪಿಗೆ ಅಂಬೇಡ್ಕರ್‌ಗೆ ವಿವಿಧೆಡೆ ನಮನ

Published:
Updated:
ಸಂವಿಧಾನ ಶಿಲ್ಪಿಗೆ ಅಂಬೇಡ್ಕರ್‌ಗೆ ವಿವಿಧೆಡೆ ನಮನ

ಚಿಟಗುಪ್ಪ: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮದಿನವನ್ನು ವಿವಿಧೆಡೆ ಶನಿವಾರ ಆಚರಿಸಲಾಯಿತು.

ಪುರಸಭೆ: ಪುರಸಭೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮುಖ್ಯಾಧಿಕಾರಿ ಹುಸಾಮೊದ್ದೀನ್ ಪೂಜೆ ಸಲ್ಲಿಸಿದರು. ಕಚೇರಿ ವ್ಯವಸ್ಥಾಪಕ ನರಸಿಂಹಲು,ಅಶೋಕ ಚನ್ನಕೋಟೆ, ಉಮೇಶ್ ಗುಡ್ಡದ್, ನರೇಶ್ ಘನಾತೆ, ಅಬ್ದುಲ್ ಖದೀರ್, ರವಿ ಸ್ವಾಮಿ, ಜಗನ್ನಾಥ್, ದಿಲೀಪ, ರಾಜು, ಇಲಾಹಿ, ಕವಿತಾ, ಸರೋಜನಿ, ಮಲ್ಲಮ್ಮ ಇದ್ದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ದಶರಥ ನಯನೂರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ ಸ್ಪರ್ಧೆ ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರಾಧ್ಯಾಪಕ ಜಯಭಾರತ ಮಂಗೇಶ್ಕರ್ ಮಾತನಾಡಿದರು. ಡಾ.ಸತೀಷ ಡೊಂಗರೆ, ಶ್ರವಣಕುಮಾರಿ, ವೀರಶೆಟ್ಟಿ ಮೈಲೂರಕರ್, ಜಯದೇವಿ ಗಾಯಕವಾಡ್, ರಮೇಶ್ ಬಿರಾದಾರ್, ಜಬಿವುಲ್ಲ, ವಿಜಯಕುಮಾರ ಗೋಪಾಳೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry