ಇದು ಫೇಸ್‌ಬುಕ್ ಮಾಯೆ

ಶನಿವಾರ, ಮಾರ್ಚ್ 23, 2019
21 °C

ಇದು ಫೇಸ್‌ಬುಕ್ ಮಾಯೆ

Published:
Updated:
ಇದು ಫೇಸ್‌ಬುಕ್ ಮಾಯೆ

‘ಕುಂತ್ರೆ ನಿಂತ್ರೆ ನಿಂದೇ ಧ್ಯಾನ ಜೀವಕ್ಕಿಲ್ಲ ಸಮಾಧಾನ ನೀನೇ ನನ್ನ ಫೇಸ್‌ಬುಕ್‌’ ಎಂದು, ಮೊಬೈಲ್‌ ನೆಟ್‌ವರ್ಕ್‌ ಸಿಗದಿರುವ ಕಡೆ ಫೇಸ್‌ಬುಕ್‌ ದಾಸರು ಹಾಡಬಹುದು.

ಫೇಸ್‌ಬುಕ್‌ ಎಂಬ ಮಾಯೆ ಮೊಬೈಲಿಗರನ್ನು ಆವರಿಸಿಕೊಂಡ ಬಗೆಯೇ ಹಾಗಿದೆ. ಬೇಜಾರಾದಾಗ, ಮಾಡಲು ಕೆಲಸವಿಲ್ಲದಿದ್ದಾಗ, ಕೆಲಸದ ಮಧ್ಯೆ ಒಂದು ಸಣ್ಣ ಬ್ರೇಕ್‌ ಬೇಕು ಎಂದಾಗ ಮೊಬೈಲ್‌ನಲ್ಲಿ ಫೇಸ್‌ಬುಕ್‌ ಮೊರೆಹೋಗುವುದು ಸಾಮಾನ್ಯ. ಫೇಸ್‌ಬುಕ್‌ ನಿಜಕ್ಕೂ ನಮ್ಮ ಒತ್ತಡವನ್ನು ನಿವಾರಿಸುತ್ತದೆಯೇ?

‘ಇಲ್ಲ’ ಎಂದು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ಯುನಿವರ್ಸಿಟಿಯ ಸಂಶೋಧಕರು ಸ್ಪಷ್ಟವಾಗಿ ಹೇಳಿದ್ದಾರೆ. ಫೇಸ್‌ಬುಕ್‌ ಖಾತೆಯನ್ನೇ ರದ್ದು ಮಾಡಿಬಿಡಿ, ನೆಮ್ಮದಿಯಾಗಿರಿ, ಒತ್ತಡಗಳಿಂದ ಹೊರಬನ್ನಿ ಎಂಬುದು ಅವರ ಸಲಹೆ! ಯಾಕೆ ಅಂತೀರಾ? ಮುಂದೆ ಓದಿ...

‘ನಾವು ಕೆಲವರನ್ನು ಐದು ದಿನ ಫೇಸ್‌ಬುಕ್‌ನಿಂದ ದೂರವಿರುವಂತೆ ಮನವಿ ಮಾಡಿದ್ದೆವು. ಈ ಅವಧಿಯಲ್ಲಿ ಅವರಲ್ಲಿ ಒತ್ತಡಕ್ಕೆ ಕಾರಣವಾಗುವ ಹಾರ್ಮೋನುಗಳ ಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕಂಡುಬಂತು. ಅಲ್ಲದೆ ಅವರ ಮಾನಸಿಕ ಒತ್ತಡದಲ್ಲಿನ ಬದಲಾವಣೆಯೂ ಗಮನಾರ್ಹವಾಗಿತ್ತು’ ಎಂದು ಕ್ವೀನ್ಸ್‌ಲ್ಯಾಂಡ್‌ ಯುನಿವರ್ಸಿಟಿಯ ಸಂಶೋಧನಾ ತಂಡದ ಮುಖ್ಯಸ್ಥ ಎರಿಕ್‌ ಎನ್ಮನ್‌ ಹೇಳಿದ್ದಾರೆ.

‘ಅಧ್ಯಯನಕ್ಕೆ ಒಳಪಡಿಸಿದ ವ್ಯಕ್ತಿಗಳಲ್ಲಿ ಎರಡು ಗುಂಪುಗಳನ್ನು ಮಾಡಲಾಗಿತ್ತು. ಒಂದು ತಂಡ ಫೇಸ್‌ಬುಕ್‌ನಿಂದ ಸಂಪೂರ್ಣವಾಗಿ ದೂರವಿದ್ದರೆ, ಮತ್ತೊಂದು ತಂಡ ಎಂದಿನಂತೆ ಫೇಸ್‌ಬುಕ್‌ ಬಳಸುತ್ತಿತ್ತು. ಆದರೆ ದೂರವುಳಿದ ತಂಡದ ಸದಸ್ಯರಿಗೆ ಫೇಸ್‌ಬುಕ್‌ ಇಲ್ಲದೆ ಅತೃಪ್ತಿ ಕಾಡುತ್ತಿದ್ದುದು ಕಂಡುಬಂತು’ ಎಂದಿದ್ದಾರೆ.

ನೀವು ನಿಮ್ಮ ಫೇಸ್‌ಬುಕ್‌ ಖಾತೆ ಸ್ವಲ್ಪ ಬಂದ್‌ ಮಾಡುತ್ತೀರೋ, ರದ್ದು ಮಾಡುತ್ತೀರೋ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry