‘ಅಂಬೇಡ್ಕರ್‌ ಜಗತ್ತು ಕಂಡ ಶ್ರೇಷ್ಠ ಚಿಂತಕ’

7
ಹರಪನಹಳ್ಳಿ: ತಾಲ್ಲೂಕಿನ ವಿವಿಧೆಡೆ ಮಹಾನ್‌ ಮಾನವತಾವಾದಿಯ ಜನ್ಮದಿನಾಚರಣೆ

‘ಅಂಬೇಡ್ಕರ್‌ ಜಗತ್ತು ಕಂಡ ಶ್ರೇಷ್ಠ ಚಿಂತಕ’

Published:
Updated:

ಹರಪನಹಳ್ಳಿ: ಅಂಬೇಡ್ಕರ್ ಅವರೊಬ್ಬ ಶ್ರೇಷ್ಠ ಚಿಂತಕ. ಸಮಾಜದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಅವರಿಗಿದ್ದ ದೃಷ್ಟಿಕೋನ ಸಾರ್ವಕಾಲಿಕವಾದದ್ದು ಎಂದು ಮಾಜಿ ಕಂದಾಯ ಸಚಿವ ಜಿ. ಕರುಣಾಕರರೆಡ್ಡಿ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸಂವಿಧಾನ ಶಿಲ್ಪಿಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸಮಾಜದ ಎಲ್ಲಾ ವರ್ಗಗಳ ಜನರು ಸಮಾನ ಹಕ್ಕು-ಅವಕಾಶಗಳನ್ನು ಹೊಂದಬೇಕು ಎಂಬ ವಿಚಾರಧಾರೆ ಯನ್ನು ಅಂಬೇಡ್ಕರ್ ಬಲವಾಗಿ ಪ್ರತಿಪಾದಿಸಿದರು. ಕಾಂಗ್ರೆಸ್, ದಲಿತರ ಮತಗಳನ್ನು ಪಡೆದಿಯೇ ಹೊರತು ಅವರ ಅಭಿವೃದ್ಧಿಗೆ ಶ್ರಮಿಸಲಿಲ್ಲ. ಮೋದಿ ಅವರು ಅಂಬೇಡ್ಕರ್ ದಿನಾಚರಣೆ ವಿಶ್ವ ಮಟ್ಟದಲ್ಲಿ ಆಚರಿಸುವಂತೆ ಮಾಡಿದ್ದಾರೆ ಎಂದು ಹೇಳಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಲಕ್ಷ್ಮಣ್, ಉಪಾಧ್ಯಕ್ಷ ಕಣವಿಹಳ್ಳಿ ಮಂಜುನಾಥ್, ಮುಖಂಡರಾದ ಎಂ.ಪಿ. ನಾಯ್ಕ, ಬಾಗಳಿ ಕೋಟ್ರೇಶಪ್ಪ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಎಲ್. ಮಂಜ್ಯನಾಯ್ಕ, ಸಣ್ಣ ಹಾಲಪ್ಪ, ಲೋಕೇಶ್, ಎಂ.ಮಲ್ಲೇಶ್, ಬಿ.ವೈ.ವೆಂಕಟೇಶನಾಯ್ಕ, ಎ. ನಾಗೇಂದ್ರಪ್ಪ, ರೆಡ್ಡಿ ಸಿದ್ದಪ್ಪ, ಯು.ಪಿ. ನಾಗರಾಜ್, ಅಧಿಕಾರ ಮಲ್ಕಪ್ಪ, ವಿನಾಯಕ, ಭಂಗಿ ಕೆಂಚಪ್ಪ ಅವರೂ ಉಪಸ್ಥಿತರಿದ್ದರು.

ಅಂಬೇಡ್ಕರ್‌ ತತ್ವ ಪ್ರಸ್ತುತ: ಬಿಜೆಪಿ ಮುಖಂಡ ಎನ್.ಕೊಟ್ರೇಶ್ ಅವರ ಪಟ್ಟಣದಲ್ಲಿರುವ ಗೃಹ ಕಚೇರಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 127ನೇ ಜಯಂತ್ಯುತ್ಸವ ಆಚರಿಸಲಾಯಿತು.

ಮುಖಂಡ ಮೈದೂರು ರಾಮಪ್ಪ, ‘ಸಾಮಾಜಿಕ ವ್ಯವಸ್ಥೆ ಸುಧಾರಣೆಗೊಂಡು ಅಸಮಾನತೆ, ತಾರತಮ್ಯ ತೊಲಗದೇ ದೇಶದ ಒಟ್ಟಾರೆ ಪರಿಸ್ಥಿತಿ ಬದಲಾಗದು. ಅಂಬೇಡ್ಕರ್ ಹಾಕಿಕೊಟ್ಟಿರುವ ಮಾರ್ಗದರ್ಶನಗಳು ಇಂದಿಗೂ ಪ್ರಸ್ತುತವಾಗಿದ್ದು, ಆ ನಿಟ್ಟಿನಲ್ಲಿ ನಾವುಗಳು ಕಾರ್ಯ ಪ್ರವೃತ್ತರಾದರೇ ಮಾತ್ರ ಸಮಾಜದಲ್ಲಿ ಉತ್ತಮ ಬೆಳವಣಿಗೆಗಳನ್ನು ಕಾಣಲು ಸಾಧ್ಯ’ ಎಂದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ವೆಂಕಟೇಶರೆಡ್ಡಿ, ಮುಖಂಡರಾದ ಎಚ್.ಎಂ.ಜಗದೀಶ್, ಓಂಕಾರಗೌಡ, ನಾಗರಾಜ ಪಾಟೀಲ್, ವಕೀಲ ವಾಗೀಶ್, ಅರುಣಕುಮಾರ್, ಬಾಗಳಿ ಬಸವರಾಜ್, ಹೇಮಾನಾಯ್ಕ, ಸಂತೋಷನಾಯ್ಕ, ಗುರುಶಾಂತಪ್ಪ, ಬಾರಿಕರ ರವಿ, ಸುಂಕದ ತೇಜು, ಚನ್ನನಗೌಡ, ಕೆಇಬಿ ಮಂಜುನಾಥ್, ನಿಚ್ಚವ್ವಹಳ್ಳಿ ಹನುಮಂತಪ್ಪ, ಮದಗಪ್ಪ, ಬೋರವೆಲ್ ಶಂಬಣ್ಣ, ಸತೀಶ್ ಉಪಸ್ಥಿತರಿದ್ದರು.

ತಾಲ್ಲೂಕು ಅಂಬೇಡ್ಕರ್ ಸಂಘ: ಪಟ್ಟಣದ ಬಾಬೂ ಜಗಜೀವನರಾಂ ಸಮುದಾಯ ಭವನದಲ್ಲಿ ತಾಲ್ಲೂಕು ಅಂಬೇಡ್ಕರ್ ಸಂಘ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ 127ನೇ ಜನ್ಮದಿನವನ್ನು ಆಚರಿಸಿತು.

ಸಂಘದ ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ, ‘ಅಂಬೇಡ್ಕರ್ ಕೇವಲ ದಲಿತ ನಾಯಕನಲ್ಲ, ಜಗತ್ತಿನ ಆದರ್ಶ ಪುರುಷ. ಅಂಬೇಡ್ಕರ್, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ವಿಚಾರಗಳಿಗೆ ಸಂಬಂಧಿಸಿದಂತೆ ಕ್ರಾಂತಿಕಾರಿ ಮನೋಭಾವ ಅಲ್ಲದೇ ಸಮಾಜದ ಏಳಿಗೆ ಹಾಗೂ ರಾಷ್ಟ್ರದ ಪ್ರಗತಿಯ ಹಾದಿ ಬಗ್ಗೆ ಅತ್ಯುತ್ತಮ ದೂರದೃಷ್ಟಿ ಹೊಂದಿದ್ದರು’ ಎಂದರು.

ಮಾದಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಯರಬಾಳು ಹನುಮಂತಪ್ಪ ಮಾತನಾಡಿ, ‘ಅಂಬೇಡ್ಕರ್ ಹಾಗೂ ಜಗಜೀವನರಾಂ ಅವರು ಸೂರ್ಯ-ಚಂದ್ರರಿದ್ದಂತೆ. ಇಬ್ಬರೂ ನಾಯಕರು ಶೋಷಿತರ ಪರವಾಗಿ ಜೀವನದುದ್ದಕ್ಕೂ ಹೋರಾಟ ನಡೆಸಿದ್ದಾರೆ’ ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಓ.ರಾಮಪ್ಪ, ಅಂಬೇಡ್ಕರ್ ಸಂಘದ ಕಾರ್ಯದರ್ಶಿ ಓ. ಮಹಾಂತೇಶ್, ಮುಖಂಡರಾದ ಪುಣಬಗಟ್ಟಿ ನಿಂಗಪ್ಪ, ಪೂಜಾರ್ ದುರುಗೇಶ್, ನೀಲಗುಂದ ಮಂಜುನಾಥ್, ಎಚ್.ಎಂ. ಜುಂಜಪ್ಪ, ತಲವಾಗಲು ನಂದೀಶ್ ಇದ್ದರು.

ಬಾಪೂಜಿ ನಗರದಲ್ಲಿ ಆಚರಣೆ:  ಅಂಬೇಡ್ಕರ ಮತ್ತು ಬಾಬು ಜಗಜೀವನರಾಂ ಯುವಕ ಸಂಘದ ನೇತೃತ್ವದಲ್ಲಿ ಅಂಬೇಡ್ಕರ್‌ ಅವರ 127ನೇ ಜಯಂತಿ ಆಚರಿಸಲಾಯಿತು.

ನಿವೃತ್ತ ಶಿಕ್ಷಕ ನಾಗೇಂದ್ರಪ್ಪ ಮಾತನಾಡಿ, ‘ಅಂಬೇಡ್ಕರ್ ಅವರ ಶೋಷಿತರ ಪರ ಹೋರಾಟ ಮಾಡಿದರು. ದಲಿತರು, ಹಿಂದುಳಿದ ವರ್ಗಕ್ಕೆ ಸೀಮಿತವಾಗದೇ ಸಮಾನತೆಯ ಆಶಯದೊಂದಿಗೆ ಸಂವಿಧಾನವನ್ನು ರೂಪಿಸಿದ್ದಾರೆ’ ಎಂದರು.

ಪುರಸಭೆ ಸದಸ್ಯೆ ಕೆಂಚಮ್ಮ ಉಚ್ಚಂಗೆಪ್ಪ, ದಲಿತ ಮುಖಂಡರಾದ ಡಿ. ರಾಜಕುಮಾರ, ಪೂಜಾರ ಉಚ್ಚಂಗೆಪ್ಪ, ಎ.ಪಕ್ಕೀರಪ್ಪ, ದೊಡ್ಮನಿ ಮಂಜುನಾಥ, ಓಂಕಾರಗೌಡ, ನಿಂಗಪ್ಪ, ಸಿ.ಚಂದ್ರಪ್ಪ, ಬಿ.ಚಂದ್ರಪ್ಪ, ನಾಗೇಂದ್ರಪ್ಪ, ಚಂದ್ರಪ್ಪ, ಯುವಕ ಸಂಘದ ಅಧ್ಯಕ್ಷ ನಿಂಗಪ್ಪ, ಉಪಾಧ್ಯಕ್ಷ ಸಿ.ಪ್ರಕಾಶ, ಎ.ಹನುಮಂತಪ್ಪ, ಮಲ್ಲಿಕಾರ್ಜುನ, ಕೆ.ದಂಡೆಪ್ಪ, ಮರಿಯಪ್ಪ, ರಾಮಪ್ಪ, ಕೆ.ರಮೇಶ, ಎಸ್.ಯಲ್ಲಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry