ಶುಕ್ರವಾರ, ಡಿಸೆಂಬರ್ 6, 2019
25 °C

ಸನ್‌ರೈಸರ್ಸ್‌ಗೆ ವಿಲಿಯಮ್ಸನ್ ಬಲ

Published:
Updated:
ಸನ್‌ರೈಸರ್ಸ್‌ಗೆ ವಿಲಿಯಮ್ಸನ್ ಬಲ

ನವದೆಹಲಿ: ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್‌ ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಬಲ ತುಂಬಿದ್ದಾರೆ. ಹೈದರಾಬಾದ್ ತಂಡ 11ನೇ ಆವೃತ್ತಿಯಲ್ಲಿ ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ಆಡಿದ್ದು ಎಲ್ಲವನ್ನೂ ಗೆದ್ದಿದೆ. ಇದರ ಶ್ರೇಯ ವಿಲಿಯಮ್ಸನ್‌ ಅವರಿಗೆ ಸಂದಿದೆ.

ಚೆಂಡು ವಿರೂಪಗೊಳಿಸಿದ ಆರೋಪ ಹೊತ್ತು ಒಂದು ವರ್ಷ ನಿಷೇಧಕ್ಕೆ ಒಳಗಾಗಿರುವ ಡೇವಿಡ್‌ ವಾರ್ನರ್ ಅವರ ಬದಲಿಗೆ ವಿಲಿಯಮ್ಸನ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಆಡುತ್ತಿರುವ ತಂಡಗಳ ನಾಯಕರ ಪೈಕಿ ಏಕೈಕ ವಿದೇಶದ ಆಟಗಾರ ಆಗಿದ್ದಾರೆ ವಿಲಿಯಮ್ಸನ್‌.

ಬ್ಯಾಟಿಂಗ್‌ನಲ್ಲಿ ವಾರ್ನರ್ ಅವರಷ್ಟು ಹೆಸರು ಮಾಡದೇ ಇದ್ದರೂ ಸನ್‌ರೈಸರ್ಸ್‌ ನಾಯಕತ್ವದ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿರುವ ಅವರು ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ. ಮೂರು ಪಂದ್ಯಗಳಲ್ಲಿ ಒಟ್ಟು 92 ರನ್ ಗಳಿಸಿರುವ ಅವರು ಕೋಲ್ಕತ್ತ ನೈಟ್‌ ರೈಡರ್ಸ್ ಎದುರು ಅರ್ಧಶತಕವನ್ನೂ ಸಿಡಿಸಿದ್ದರು. ಈ ತಂಡ ಮುಂದಿನ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್‌ ಎದುರು ಸೆಣಸಲಿದೆ.

ಪ್ರತಿಕ್ರಿಯಿಸಿ (+)