ಗುರು, ಮಾಲಗತ್ತಿಗೆ ಷೋಕಾಸ್ ನೋಟಿಸ್

7
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು

ಗುರು, ಮಾಲಗತ್ತಿಗೆ ಷೋಕಾಸ್ ನೋಟಿಸ್

Published:
Updated:

ಮೈಸೂರು: ಸರ್ಕಾರಿ ಹುದ್ದೆಯಲ್ಲಿದ್ದುಕೊಂಡು ಕಾಂಗ್ರೆಸ್‌ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಬಿ.ಪಿ.ಮಹೇಶಚಂದ್ರ ಗುರು ಹಾಗೂ ಅರವಿಂದ ಮಾಲಗತ್ತಿ ಅವರಿಗೆ ವಿವರಣೆ ಕೋರಿ ವಿ.ವಿ ಷೋಕಾಸ್ ನೋಟಿಸ್‌ ನೀಡಿದೆ.

ಮೈಸೂರಿನಲ್ಲಿ ನಡೆದಿದ್ದ ‘ಜನರಾಜಕಾರಣ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಸಿದ್ದರಾಮಯ್ಯ ಪರ ಮತಯಾಚಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಅಧಿಕಾರಿಗಳು ಮೈಸೂರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದರು. ಮೈಸೂರು ವಿ.ವಿ ಕುಲಸಚಿವೆ ಡಿ.ಭಾರತಿ ನೋಟಿಸ್‌ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry