ಮಂಗಳವಾರ, ಜೂಲೈ 7, 2020
27 °C

ಚೀನಾದ ಯುದ್ಧ ವಿಮಾನ ಕಾರ್ಯಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

ಚೀನಾದ ಯುದ್ಧ ವಿಮಾನ ಕಾರ್ಯಾರಂಭ

ಬೀಜಿಂಗ್‌: ದೇಶೀಯವಾಗಿ ಅಭಿವೃದ್ಧಿಪಡಿಸಿದ ಬಹು ವಿಧ ಕಾರ್ಯಾಚರಣೆಯ ಜೆ–10ಸಿ ಯುದ್ಧ ವಿಮಾನ ಸೋಮವಾರದಿಂದ ಕಾರ್ಯಾರಂಭ ಮಾಡಿದೆ ಎಂದು ಚೀನಾದ ವಾಯುಪಡೆ ಹೇಳಿದೆ.

ಈ ಸೂಪರ್‌ಸಾನಿಕ್‌ ಯುದ್ಧ ವಿಮಾನವನ್ನು ರಹಸ್ಯ ಕಾರ್ಯಾಚರಣೆಗಳಿಗೆ ಬಳಸಬಹುದು. ಭೂಮಿ ಮತ್ತು ಸಮುದ್ರದಲ್ಲಿನ ಗುರಿಯನ್ನು ಧ್ವಂಸಗೊಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ರಹಸ್ಯ ಕಾರ್ಯಾಚರಣೆಗೆ ಬಳಸುವ ಅತ್ಯಾಧುನಿಕ ಜೆ–20 ಯುದ್ಧ ವಿಮಾನವನ್ನು ಫೆಬ್ರುವರಿ ತಿಂಗಳಿನಲ್ಲಿ ಚೀನಾದ ವಾಯುಪಡೆಯ ಸೇವೆಗೆ ಸೇರ್ಪಡೆಗೊಳಿಸಲಾಗಿತ್ತು. ಜೆ–20 ನಾಲ್ಕನೇ ತಲೆಮಾರಿನ ಮಧ್ಯಮ ಮತ್ತು ದೂರ ವ್ಯಾಪ್ತಿಯ ಯುದ್ಧ ವಿಮಾನವಾಗಿದೆ.

ಹೊಸ ಯುದ್ಧ ವಿಮಾನಗಳು ವಾಯುಪಡೆಗೆ ಇನ್ನಷ್ಟು ಬಲ ತುಂಬಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.