ಸೇನೆ ಕೆಲಸಗಾರ ಸಾವು

7

ಸೇನೆ ಕೆಲಸಗಾರ ಸಾವು

Published:
Updated:

ಶ್ರೀನಗರ: ಕದನ ವಿರಾಮ ಉಲ್ಲಂಘಿಸಿ ಬಾರಾಮುಲ್ಲಾ ಜಿಲ್ಲೆಯ ಉರಿ ಪ್ರದೇಶದಲ್ಲಿ ಪಾಕಿಸ್ತಾನ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಸೇನೆಯ ಕೆಲಸಗಾರನೊಬ್ಬ ಮೃತಪಟ್ಟಿದ್ದಾನೆ.

ಛೂಕಾಸ್‌ನ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನಿ ಪಡೆಗಳು ಗುಂಡಿನ ದಾಳಿ ನಡೆಸಿದ್ದು, 4ನೇ ಮದ್ರಾಸ್‌ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಖುರ್ಷಿದ್‌ ಅಹಮದ್ ಎಂಬುವವರ ಕುತ್ತಿಗೆ ಹಾಗೂ ಎರಡೂ ಕಾಲುಗಳಿಗೆ ಗುಂಡು ಹೊಕ್ಕಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತದ ಪಡೆಗಳು ತಕ್ಷಣವೇ ಪ್ರತಿ ದಾಳಿ ನಡೆಸಿದ್ದಾರೆ ಎಂದು ಹೇಳಿರುವ ಸೇನಾ ವಕ್ತಾರರು, ಎರಡೂ ಕಡೆಗಳಿಂದ ಗುಂಡಿನ ಚಕಮಕಿ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry