ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯ

ಭಾನುವಾರ, ಮಾರ್ಚ್ 24, 2019
27 °C

ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯ

Published:
Updated:
ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯ

ಮುಂಬೈ: ದೇಶದ ಆರ್ಥಿಕ ಪ್ರಗತಿಯನ್ನು ಸೂಚಿಸುವ ಸಂಗತಿಗಳು ಸಕಾರಾತ್ಮಕ ಮಟ್ಟದಲ್ಲಿವೆ. ಇದರಿಂದಾಗಿ ಷೇರುಪೇಟೆಯಲ್ಲಿ ಏರುಮುಖ ವಹಿವಾಟು ನಡೆಯುತ್ತಿದೆ.

ಮಾರ್ಚ್‌ ತಿಂಗಳ ಚಿಲ್ಲರೆ ಮತ್ತು ಸಗಟು ಹಣದುಬ್ಬರ ಇಳಿಕೆ ಕಂಡಿವೆ. ಫೆಬ್ರುವರಿ ತಿಂಗಳ ಕೈಗಾರಿಕಾ ಪ್ರಗತಿ ಸೂಚ್ಯಂಕ (ಐಐಪಿ) ಏರಿಕೆ ಕಂಡಿದೆ. ಈ ಸಂಗತಿಗಳು ಹೂಡಿಕೆದಾರರಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ಷೇರುಪೇಟೆಯಲ್ಲಿ ಉತ್ತಮ ಚಟುವಟಿಕೆ ನಡೆಯುವಂತೆ ಮಾಡಿವೆ.

ಅಮೆರಿಕ ಮತ್ತು ಸಿರಿಯಾ ಮಧ್ಯೆ ಮೂಡಿರುವ ರಾಜಕೀಯ ಬಿಕ್ಕಟ್ಟಿನಿಂದಾಗಿ ಹೂಡಿಕೆದಾರರು ತುಸು ಎಚ್ಚರಿಕೆಯಿಂದಲೇ ವಹಿವಾಟು ನಡೆಸುತ್ತಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಸತತ ಎಂಟನೇ ವಹಿವಾಟು ಅವಧಿಯಲ್ಲಿಯೂ ಸಕಾರಾತ್ಮಕ ಅಂತ್ಯ ಕಂಡಿತು. ಸೋಮವಾರ 113 ಅಂಶ ಏರಿಕೆ ಕಂಡು 34,305 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಹಿಂದಿನ ಏಳು ದಿನಗಳ ವಹಿವಾಟು ಅವಧಿಯಲ್ಲಿ 1,174 ಅಂಶಗಳಷ್ಟು ಏರಿಕೆ ದಾಖಲಿಸಿದೆ.

ಲಾಭ ಗಳಿಕೆ ಉದ್ದೇಶದ ವಹಿವಾಟಿನಿಂದಾಗಿ ಸೂಚ್ಯಂಕವು 33,899 ಅಂಶಗಳ ಕನಿಷ್ಟ ಮಟ್ಟವನ್ನೂ ತಲುಪಿತ್ತು. ನಂತರ ಖರೀದಿ ಚಟುವಟಿಕೆಯಲ್ಲಿ ಚೇತರಿಕೆ ಕಂಡು 34,341 ಅಂಶಗಳ ಗರಿಷ್ಠ ಮಟ್ಟಕ್ಕೇರಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 48 ಅಂಶ ಹೆಚ್ಚಾಗಿ 10,528 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಕಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry