ಕೊಲಂಬೊ: ಈ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಹಿನ್ನಡೆಗೆ ಅದರ ಅಗ್ರ ಬ್ಯಾಟರ್ಗಳು ಪರದಾಡುತ್ತಿರುವುದು ಪ್ರಮುಖ ಕಾರಣವಾಗಿದೆ. ಬ್ಯಾಟರ್ಗಳ ಪಡೆ ಲಯಕ್ಕೆ ಮರಳಬಹುದೆಂಬ ವಿಶ್ವಾಸದೊಡನೆ ಪಾಕಿಸ್ತಾನ ತಂಡವು ಬುಧವಾರ ನಡೆಯುವ ತನ್ನ ಕೊನೆಯ, ಆದರೆ ಮಹತ್ವದ ಲೀಗ್ ಪಂದ್ಯದಲ್ಲಿ ನಮಿಬಿಯಾ ತಂಡವನ್ನು ಎದುರಿಸಲಿದೆ.

ಹಾಲಿ ಚಾಂಪಿಯನ್ ಭಾರತ ತಂಡವು ಭಾನುವಾರ ಪಾಕಿಸ್ತಾನ ತಂಡವನ್ನು ಸೋಲಿಸಿ ಎ ಗುಂಪಿನಿಂದ ಈಗಾಗಲೇ ಸೂಪರ್ ಎಂಟರ ಹಂತದಲ್ಲಿ ಸ್ಥಾನ ಕಾದಿರಿಸಿದೆ. ಗುಂಪಿನಲ್ಲಿ ಎರಡನೇ ಸ್ಥಾನಕ್ಕೆ ಪೈಪೋಟಿಯಿದೆ. ಅಮೆರಿಕ ತಂಡವೂ ಸೂಪರ್ ಎಂಟರ ಹಂತಕ್ಕೆ ಮುನ್ನಡೆಯುವ ಅವಕಾಶ ಹೊಂದಿದೆ.

ಎರಡೂ ತಂಡಗಳು ತಲಾ ನಾಲ್ಕು ಪಾಯಿಂಟ್ಸ್ ಸಂಗ್ರಹಿಸಿವೆ. ಆದರೆ ಪಾಕಿಸ್ತಾನದ ನೆಟ್ರನ್ ರೇಟ್ (–0.403), ಅಮೆರಿಕಕ್ಕಿಂತ (0.788) ಕಡಿಮೆಯಿದೆ. ಪಾಕ್ಗೆ ಹೆಚ್ಚಿನ ಲೆಕ್ಕಾಚಾರ ಅಗತ್ಯವಿಲ್ಲ. ನಮೀಬಿಯಾ ವಿರುದ್ಧ ಗೆದ್ದರೆ ತಂಡ ಸೂಪರ್ ಎಂಟರ ಘಟ್ಟ ತಲುಪಬಹುದು. ಸೋಲೇನಾದರೂ ಎದುರಾದರೆ ಸಲ್ಮಾನ್ ಅಲಿ ಆಘಾ ಬಳಗಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಭಾರತ ವಿರುದ್ಧ ದೊಡ್ಡ ಅಂತರದ ಸೋಲು ತಂಡವನ್ನು ಈ ಸ್ಥಿತಿಗೆ ತಳ್ಳಿದೆ.

ಪ್ರಮುಖ ಬ್ಯಾಟರ್ ಬಾಬರ್ ಆಜಂ, ಆರಂಭ ಆಟಗಾರರಾದ ಸಾಹಿಬ್ಝಾದಾ ಫರ್ಹಾನ್, ಸಯೀಮ್ ಅಯೂಬ್, ನಾಯಕ ಸಲ್ಮಾನ್ ಆಘಾ ಅವರು ರನ್ ಬರ ಎದುರಿಸುತ್ತಿರುವುದು ತಂಡಕ್ಕೆ ತಲೆನೋವಾಗಿದೆ. ಕೊಲಂಬೊದಲ್ಲಿ ಭಾರತ ವಿರುದ್ಧ ಪಂದ್ಯದಲ್ಲೂ ಇವರೆಲ್ಲಾ ವಿಫಲರಾಗಿದ್ದರು.
7 ಎಸೆತಗಳಲ್ಲಿ 5 ರನ್ ಗಳಿಸಿ ನಿರ್ಗಮಿಸಿದ್ದ ಮಾಜಿ ನಾಯಕ ಆಜಂ ಅವರ ತಲೆದಂಡವಾಗ ಬೇಕೆಂಬ ಕೂಗು ಪಾಕಿಸ್ತಾನ ದಲ್ಲಿ ಜೋರಾಗಿದೆ. ಫರ್ಹಾನ್ ಮತ್ತು ಅಯೂಬ್ ಜೋಡಿ ತಂಡಕ್ಕೆ ಉತ್ತಮ ಆರಂಭ ನೀಡಿಲ್ಲ.

ವೇಗದ ಬೌಲರ್ ಶಾಹಿನ್ ಶಾ ಅಫ್ರೀದಿ ಅವರಿಗೆ ಲಯ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಬೌಲಿಂಗ್ನಲ್ಲಿ ಸ್ವಲ್ಪ ಗಮನಸೆಳೆದವರು ಸಯೀಮ್ ಅಯೂಬ್. ಅವರು ಭಾರತದ ಅಗ್ರ ಆಟಗಾರರಿಗೆ ಸವಾಲಾಗಿದ್ದರು. ಪದೇ ಪದೇ ಬದಲಾವಣೆಗಳು ಪಾಕ್ ತಂಡದ ದುಃಸ್ಥಿತಿಗೆ ಕಾರಣವಾಗಿದೆ.

ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿರುವ ನಮೀಬಿಯಾ ಒಂದೂ ಪಂದ್ಯ ಗೆದಿಲ್ಲ. ತಂಡ ಪಾಕಿಸ್ತಾನಕ್ಕೆ ಎಷ್ಟರ ಮಟ್ಟಿಗೆ ಪೈಪೋಟಿ ಒಡ್ಡುತ್ತದೆ ಎಂಬುದು ಕುತೂಹಲದ ಸಂಗತಿ. ಎಡಗೈ ವೇಗಿ ಜೆ.ಜೆ.ಸ್ಮಟ್ಸ್ ಅವರು ಪ್ರಮುಖ ತಂಡಗಳ ಬ್ಯಾಟರ್ಗಳನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.

ಆರಂಭ ಆಟಗಾರ ಲಾರೆನ್ ಸ್ಟೀನ್ಕ್ಯಾಂಪ್ ಅವರು ಬ್ಯಾಟಿಂಗ್ನಲ್ಲಿ ಉಪಯುಕ್ತ ಆಟವಾಡಿದ್ದಾರೆ. ಮಧ್ಯಮ ಕ್ರಮಾಂಕದ ಆಟಗಾರರಾದ ಜಾನ್ ನಿಕೋಲಸ್ ಫ್ರೈಲಿಂಕ್ ಮತ್ತು ಜೇನ್ ನಿಕೋಲ್ ಲೋಫ್ಟಿ ಈಟನ್ ಕೂಡ ಕೆಲವು ಪಂದ್ಯಗಳಲ್ಲಿ ಗಮನಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.