ಪಲೆಕೆಲೆ: ಮಂಗಳವಾರ ನಡೆಯಬೇಕಿದ್ದ ಐರ್ಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯವು ಮಳೆಯಿಂದಾಗಿ ರದ್ದಾದ ನಂತರ ಜಿಂಬಾಬ್ವೆ ತಂಡವು ಟಿ20 ವಿಶ್ವಕಪ್ನ ಸೂಪರ್ 8ರ ಹಂತಕ್ಕೆ ಮುನ್ನಡೆಯಿತು. ಇದರೊಂದಿಗೆ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವೂ ಗುಂಪು ಹಂತದಲ್ಲೇ ಹೊರಬಿತ್ತು.

ಐರ್ಲೆಂಡ್ ಮತ್ತು ಜಿಂಬಾಬ್ವೆ ತಂಡಗಳಿಗೆ ಒಂದು ಅಂಕ ನೀಡಲಾಯಿತು. ಈ ಮೊದಲು ಎರಡು ಪಂದ್ಯಗಳನ್ನು ಗೆದ್ದಿದ್ದ ಜಿಂಬಾಬ್ವೆ ಐದು ಅಂಕಗಳೊಂದಿಗೆ ಬಿ ಗುಂಪಿನಿಂದ ಸೂಪರ್ 8ರ ಹಂತಕ್ಕೆ ಸ್ಥಾನ ಕಾಯ್ದಿರಿಸಿತು. ಆ ತಂಡವು ಇದೇ 26ರಂದು ಚೆನ್ನೈನಲ್ಲಿ ನಡೆಯುವ ತನ್ನ ಸೂಪರ್ 8ರ ಮೊದಲ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.

ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಶ್ರೀಲಂಕಾ (6) ಈಗಾಗಲೇ ಸೂಪರ್ 8ಕ್ಕೆ ಅರ್ಹತೆ ಪಡೆದಿರುವುದರಿಂದ ಮಂಗಳವಾರದ ಪಂದ್ಯ ಜಿಂಬಾಬ್ವೆ ಮತ್ತು ಐರ್ಲೆಂಡ್ಗೆ ಹೆಚ್ಚಿನ ಮಹತ್ವದ್ದಾಗಿತ್ತು. ಪಂದ್ಯ ರದ್ದಾದ ಕಾರಣ ಜಿಂಬಾಬ್ವೆಯ ಹಾದಿ ಸುಗಮವಾಯಿತು. ಐರ್ಲೆಂಡ್ ತಂಡವು ಮೂರು ಅಂಕಗಳೊಂದಿಗೆ ಅಭಿಯಾನವನ್ನು ಮುಗಿಸಿತು. ಆಸ್ಟ್ರೇಲಿಯಾ ತಂಡಕ್ಕೆ ಜಿಂಬಾಬ್ವೆ ಮತ್ತು ಶ್ರೀಲಂಕಾ ವಿರುದ್ಧದ ಸೋಲುಗಳು ಮುಳುವಾದವು.

2024ರ ಆವೃತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದ್ದ ಜಿಂಬಾಬ್ವೆ, ಹಾಲಿ ಟೂರ್ನಿಯಲ್ಲಿ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆದ ಏಳನೇ ತಂಡ ಎನಿಸಿತು. ಜಿಂಬಾಬ್ವೆ ಇದೇ 19ರಂದು ತನ್ನ ಕೊನೆಯ ಗುಂಪು ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಲಿದೆ.

ಸೂಪರ್ 8ರ ಒಂದನೇ ಗುಂಪಿನಲ್ಲಿ ಭಾರತ

ಹಾಲಿ ಚಾಂಪಿಯನ್ ಭಾರತ ತಂಡವು ಟಿ20 ವಿಶ್ವಕಪ್ ಸೂಪರ್ 8ರ ಹಂತದ ಒಂದನೇ ಗುಂಪಿನಲ್ಲಿ ಸ್ಥಾನ ಪಡೆದಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡಗಳೂ ಇದೇ ಗುಂಪಿನಲ್ಲಿವೆ.

ಈ ಹಂತದಲ್ಲಿ ಪ್ರತಿ ತಂಡವು ಮೂರು ಪಂದ್ಯಗಳನ್ನು ಆಡಬೇಕಿದೆ. ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ಗೆ ಮುನ್ನಡೆಯಲಿವೆ.

ಭಾರತ ತಂಡವು ಇದೇ 22ರಂದು ದಕ್ಷಿಣ ಆಫ್ರಿಕಾ ವಿರುದ್ಧ; 26ರಂದು ಜಿಂಬಾಬ್ವೆ ವಿರುದ್ಧ; ಮಾರ್ಚ್ 1ರಂದು ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲಿದೆ.

ಸೂಪರ್ 8ರ ಎರಡನೇ ಗುಂಪಿನಲ್ಲಿ ಶ್ರೀಲಂಕಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳಿವೆ. ಉಳಿದಿರುವ ಒಂದು ಸ್ಥಾನಕ್ಕಾಗಿ ಪಾಕಿಸ್ತಾನ ಮತ್ತು ಅಮೆರಿಕ ತಂಡಗಳ ನಡುವೆ ಪೈಪೋಟಿ ಇದೆ.

ಪಾಕಿಸ್ತಾನವು ಬುಧವಾರ ನಡೆಯುವ ನಿರ್ಣಾಯಕ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಜಯ ಸಾಧಿಸಿದರೆ ಕೊನೆಯ ತಂಡವಾಗಿ ಸೂಪರ್ 8ರ ಹಂತ ಪ್ರವೇಶಿಸಲಿದೆ. ಒಂದು ವೇಳೆ ಪಾಕ್ ಸೋತಲ್ಲಿ ನೆಟ್ ರನ್ರೇಟ್ ಆಧಾರದಲ್ಲಿ ಅಮೆರಿಕಕ್ಕೆ ಅವಕಾಶ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.