ಶುಕ್ರವಾರ, ಡಿಸೆಂಬರ್ 6, 2019
26 °C

ರಿಟರ್ನ್‌: ಹೊಸ ಮಾದರಿ ಅಂತಿಮ

Published:
Updated:
ರಿಟರ್ನ್‌: ಹೊಸ ಮಾದರಿ ಅಂತಿಮ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಲೆಕ್ಕಪತ್ರ ವಿವರ ಸಲ್ಲಿಕೆ (ಜಿಎಸ್‌ಟಿ) ಸರಳಗೊಳಿಸುವುದನ್ನು ಹಣಕಾಸು ಸಚಿವರ ಸಮಿತಿಯು ಅಂತಿಮಗೊಳಿಸಿದೆ.

ಒಂದೇ ಪುಟದ ರಿಟರ್ನ್‌ ಅರ್ಜಿ ಮಾದರಿಗೆ ಮಂಗಳವಾರ ಇಲ್ಲಿ ನಡೆದ ಸಭೆಯಲ್ಲಿ ಸಮ್ಮತಿ ನೀಡಲಾಗಿದೆ. ರಿಟರ್ನ್‌ ಸಲ್ಲಿಕೆ ಪ್ರಕ್ರಿಯೆ ಸರಳಗೊಳಿಸುವ ಸಂಬಂಧ ನಡೆದ ಸಭೆಯಲ್ಲಿ ಉದ್ಯಮ ‍ಪ್ರತಿನಿಧಿಗಳು ಮತ್ತು ತೆರಿಗೆ ಪರಿಣತರು ಭಾಗವಹಿಸಿದ್ದರು.

‘ಸಭೆಯಲ್ಲಿ ವ್ಯಕ್ತವಾದ ಸಲಹೆಗಳನ್ನು ಆಧರಿಸಿ ಹೊಸ ಮಾದರಿ ಒಪ್ಪಿಕೊಳ್ಳಲಾಗಿದೆ. ಅದನ್ನು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗುವುದು. ಸರಳೀಕೃತ ರಿಟರ್ನ್‌ ಸಲ್ಲಿಕೆ ಪ್ರಕ್ರಿಯೆ ಅಂತಿಮಗೊಂಡು ಜಾರಿಗೆ ಬರುವವರೆಗೆ ಸದ್ಯಕ್ಕೆ ಬಳಕೆಯಲ್ಲಿ ಇರುವ ‘ಜಿಎಸ್‌ಟಿಆರ್‌–3ಬಿ’ ಮುಂದು ವರೆಯಲಿದೆ’ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಗುಜರಾತ್‌ ಉಪಮುಖ್ಯಮಂತ್ರಿ ಸುಶೀಲ್‌ ಮೋದಿ ಹೇಳಿದ್ದಾರೆ.

‘ವಹಿವಾಟುದಾರರು ಈಗ ಪ್ರತಿ ತಿಂಗಳೂ  ಸಲ್ಲಿಸುತ್ತಿರುವ ಜಿಎಸ್‌ಟಿಆರ್‌–1, 2 ಮತ್ತು 3ರ ಬದಲಿಗೆ ಒಂದೇ ರಿಟರ್ನ್‌ ಸಲ್ಲಿಸುವುದಕ್ಕೆ ಸಚಿವರ ಸಮಿತಿಯು ಒಮ್ಮತಾಭಿಪ್ರಾಯಕ್ಕೆ ಬಂದಿದೆ.

‘ಸರಳೀಕೃತ ರಿಟರ್ನ್‌ ಸಲ್ಲಿಕೆಯು ಬೊಕ್ಕಸಕ್ಕೆ ಬರುವ ವರಮಾನಕ್ಕೆ  ನಷ್ಟ ಉಂಟು ಮಾಡಲಾರದು ಮತ್ತು ತೆರಿಗೆ ಪಾವತಿಸುವವರಿಗೆ ಯಾವುದೇ ಬಗೆಯಲ್ಲಿ ತೊಂದರೆ ನೀಡುವುದಿಲ್ಲ’ ಎಂದು ಹೇಳಿದ್ದಾರೆ.

ಕಳೆದ ತಿಂಗಳು ಸಭೆ ಸೇರಿದ್ದ ಜಿಎಸ್‌ಟಿ ಮಂಡಳಿಯು, ಜಿಎಸ್‌ಟಿ ರಿಟರ್ನ್‌ಗೆ ಸಂಬಂಧಿಸಿದಂತೆ ಎರಡು ಮಾದರಿಗಳನ್ನು ಚರ್ಚಿಸಿತ್ತು. ಅವುಗಳನ್ನು ಇನ್ನಷ್ಟು ಸರಳೀಕರಣಗೊಳಿಸುವ ಸಂಬಂಧ ಸಚಿವರ ಸಮಿತಿಯು ವಿವರವಾಗಿ ಪರಿಶೀಲಿಸಬೇಕು ಎಂದು ನಿರ್ಣಯಿಸಿತ್ತು.

ಈಗ ಆ ಎರಡೂ ಮಾದರಿಗಳನ್ನು ಕೈಬಿಟ್ಟು ಹೊಸ ಮಾದರಿಗೆ ಸಮ್ಮತಿ ನೀಡಲಾಗಿದೆ.

ಪ್ರತಿಕ್ರಿಯಿಸಿ (+)