ಉತ್ತರಪ್ರದೇಶ: ಮತ್ತೆ ಅತ್ಯಾಚಾರ, ಕೊಲೆ

ಮಂಗಳವಾರ, ಮಾರ್ಚ್ 26, 2019
26 °C

ಉತ್ತರಪ್ರದೇಶ: ಮತ್ತೆ ಅತ್ಯಾಚಾರ, ಕೊಲೆ

Published:
Updated:
ಉತ್ತರಪ್ರದೇಶ: ಮತ್ತೆ ಅತ್ಯಾಚಾರ, ಕೊಲೆ

ಇಟಾವ (ಉತ್ತರ ಪ್ರದೇಶ):  ಉತ್ತರ ಪ್ರದೇಶದ ಇಟಾವದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಸೋಮವಾರ ರಾತ್ರಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ.

ಬಾಲಕಿಯ ಪೋಷಕರು, ಸಂಬಂಧಿಕರ ಮನೆಯಲ್ಲಿ ಮದುವೆಗೆಂದು ಇಲ್ಲಿನ ಅಲಿಗಂಜ್‌ ರೋಡ್ ಪ್ರದೇಶಕ್ಕೆ ಬಂದಿದ್ದಾಗ ಅತ್ಯಾಚಾರ ನಡೆದಿದೆ. ಮದುವೆಗೆ ಶಾಮಿಯಾನ ಹಾಕಲೆಂದು ಬಂದಿದ್ದ ಸೋನು ಜಾಟವ್ (19) ಎಂಬ ಯುವಕ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮದುವೆ ಮಂಟಪದಲ್ಲಿ ಪೋಷಕರ ಜತೆ ಮಲಗಿದ್ದ ಬಾಲಕಿಯನ್ನು, ತಡರಾತ್ರಿ 1.30ರ ಸುಮಾರಿಗೆ ಸೋನು ಎತ್ತೊಯ್ದಿದ್ದಾನೆ. ಸಮೀಪದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಬಾಲಕಿಯ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಪೋಷಕರು ಮತ್ತು ಜತೆಯಲ್ಲಿದ್ದವರು ಬೆಳಿಗ್ಗೆ ಬಾಲಕಿಯನ್ನು ಹುಡುಕುತ್ತಾ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿಯನ್ನು ಕೊಲೆ ಮಾಡಿ, ಶವದ ಪಕ್ಕದಲ್ಲೇ ಆರೋಪಿ ಬೆತ್ತಲೆ ಸ್ಥಿತಿಯಲ್ಲಿ ಮಲಗಿದ್ದ. ಬಾಲಕಿಯನ್ನು ಕೊಲ್ಲಲು ಬಳಸಿದ್ದ ಹಗ್ಗ ಆಕೆಯ ಕುತ್ತಿಗೆಯಲ್ಲೇ ಇತ್ತು. ಪೋಷಕರು ತಕ್ಷಣವೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಎತ್ತಿಕೊಂಡು ಹೋಗಿದ್ದಾರೆ. ಆದರೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ’ ಎಂದರು.

‘ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ’ ಎಂದಿದ್ದಾರೆ. ಅತ್ಯಾಚಾರಕ್ಕೆ ಬಲಿಯಾಗಿದ್ದಾಳೆ ಎಂದು ತಿಳಿಯುತ್ತಿದಂತೆಯೇ ಮದುವೆಗೆ ಬಂದಿದ್ದವರೆಲ್ಲರೂ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry