ಗುರುವಾರ , ಡಿಸೆಂಬರ್ 12, 2019
20 °C
ಭವಿಷ್ಯದ ತಂಡ ಕಟ್ಟುವುದಕ್ಕಾಗಿ ಯೋಜನೆ ಸಿದ್ಧ

ಐಪಿಎಲ್‌: ಯುವ ಆಟಗಾರರ ಮೇಲೆ ಬಿಸಿಸಿಐ ಕಣ್ಣು

ಪಿಟಿಐ Updated:

ಅಕ್ಷರ ಗಾತ್ರ : | |

ಐಪಿಎಲ್‌: ಯುವ ಆಟಗಾರರ ಮೇಲೆ ಬಿಸಿಸಿಐ ಕಣ್ಣು

ನವದೆಹಲಿ: ಭವಿಷ್ಯದ ತಂಡ ಕಟ್ಟುವುದಕ್ಕಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್‌ನಲ್ಲಿ ಆಡುತ್ತಿರುವ ಯುವ ಆಟಗಾರರ ಮೇಲೆ ಕಣ್ಣಿಟ್ಟಿದೆ.

ಕೇಂದ್ರೀಯ ಗುತ್ತಿಗೆ ಪದ್ಧತಿಯಲ್ಲಿ ಸೇರಿರದ ಒಟ್ಟು 23 ಆಟಗಾರರ ಮೇಲೆ ನೋಟ ಇರಿಸಿರುವ ಬಿಸಿಸಿಐ ಮೂರು ಗುಂಪುಗಳಲ್ಲಿ ಅವರನ್ನು ವಿಂಗಡಿಸಿದೆ. ಈ ಪೈಕಿ ಕೆಲವರನ್ನು ಯಾವುದೇ ಕ್ಷಣದಲ್ಲಿ ರಾಷ್ಟ್ರೀಯ ತಂಡಕ್ಕೆ ಕರೆಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಐಪಿಎಲ್‌ನಲ್ಲಿ ಅವರಿಗೆ ಹೆಚ್ಚು ಒತ್ತಡ ಬೀಳದಂತೆ ಗಮನ ನೀಡಲಾಗುತ್ತಿದೆ.

19 ವರ್ಷದೊಳಗಿನ ಆಟಗಾರರು, ಈ ಹಿಂದೆ 19 ವರ್ಷದೊಳಗಿವನರ ಟೂರ್ನಿಯಲ್ಲಿ ಆಡಿದವರು ಮತ್ತು ‘ಎ’ ತಂಡದ ಆಟಗಾರರ ಮೇಲೆ ನಿಗಾ ಇರಿಸಲಾಗಿದೆ. ಮಯಂಕ್ ಅಗರವಾಲ್‌, ಪೃಥ್ವಿ ಶಾ ಮತ್ತು ಶಿವಂ ಮಾವಿ ಈ ಪಟ್ಟಿಯಲ್ಲಿರುವ ಪ್ರಮುಖರು.

‘ಆಯ್ದ ಯುವ ಆಟಗಾರರನ್ನು ತನ್ನ ಆಸ್ತಿ ಎಂದು ಪರಿಗಣಿಸಿರುವ ಬಿಸಿಸಿಐ, ಐಪಿಎಲ್ ಅಭ್ಯಾಸದ ಸಂದರ್ಭದಲ್ಲಿ ಅವರ ಮೇಲೆ ಹೆಚ್ಚು ಒತ್ತಡ ಬೀಳದಂತೆ ನೋಡಿಕೊಳ್ಳುತ್ತಿದೆ. ಅಭ್ಯಾಸದ ಸಂದರ್ಭದಲ್ಲಿ ಈ ಆಟಗಾರರನ್ನು ಬಳಸಿಕೊಂಡ ರೀತಿಯ ಕುರಿತು ಪ್ರತಿ ಫ್ರಾಂಚೈಸ್‌ನ ಟ್ರೇನರ್ ಮತ್ತು ಫಿಸಿಯೊ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಮಾಹಿತಿ ನೀಡಬೇಕು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದರು.

ಬಿಸಿಸಿಐ ಕಣ್ಣಿಟ್ಟಿರುವ ಆಟಗಾರರು- 19 ವರ್ಷದೊಳಗಿನವರು: ಪೃಥ್ವಿ ಶಾ, ಶುಭಮನ್‌ ಗಿಲ್‌, ಶಿವಂ ಮಾವಿ, ಕಮಲೇಶ್‌ ನಾಗರಕೋಟಿ.

ಹಿಂದೆ 19 ವರ್ಷದೊಳಗಿನ ಕ್ರಿಕೆಟ್ ಆಡಿದವರು: ಈಶಾನ್ ಕಿಶನ್‌, ರಿಷಭ್ ಪಂತ್‌, ಆವೇಶ್ ಖಾನ್‌, ಖಲೀಲ್ ಅಹಮ್ಮದ್‌, ಸಂಜು ಸ್ಯಾಮ್ಸನ್‌.

ದೇಶಿ, ಭಾರತ ‘ಎ’ ತಂಡದ ಆಟಗಾರರು: ಶ್ರೇಯಸ್ ಅಯ್ಯರ್‌, ವಾಷಿಂಗ್ಟನ್ ಸುಂದರ್‌, ವಿಜಯಶಂಕರ್‌, ಜಯದೇವ ಉನದ್ಕತ್‌, ಬಾಸಿಲ್ ಥಂಪಿ, ದೀಪಕ್ ಹೂಡ, ಮಯಂಕ್ ಅಗರವಾಲ್‌, ರವಿಕುಮಾರ್ ಸಮರ್ಥ್‌, ನವದೀಪ್ ಸೈನಿ, ಸಿದ್ಧಾರ್ಥ್‌ ಕೌಲ್‌, ಹನುಮ ವಿಹಾರಿ, ಅಂಕಿತ್ ಭಾವ್ನೆ.

ಪ್ರತಿಕ್ರಿಯಿಸಿ (+)