ಭಾನುವಾರ, ಡಿಸೆಂಬರ್ 15, 2019
19 °C

ಸ್ವಾದಿಯಲ್ಲಿ ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾದಿಯಲ್ಲಿ ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವ

ಶಿರಸಿ: ಪ್ರಾಚೀನ ಇತಿಹಾಸ ಹೊಂದಿರುವ (1600 ವರ್ಷ) ತಾಲ್ಲೂಕಿನ ಸ್ವಾದಿ ಜೈನ ಮಠದಲ್ಲಿರುವ ನೇಮಿನಾಥ ತೀರ್ಥಂಕರರ ಬಸದಿಯನ್ನು ₹1.5 ಕೋಟಿ ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳಿಸಲಾಗಿದೆ.

ಈ ಜಿನಮಂದಿರದ ಧಾಮ ಸಂಪ್ರೋಕ್ಷಣೆ, ನೇಮಿನಾಥ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮವನ್ನು ಮೇ 2ರಿಂದ 8ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಠಾಧೀಶ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಚಾಲುಕ್ಯ ಶೈಲಿಯಲ್ಲಿ ನಿರ್ಮಾಣವಾಗಿರುವ ಮಂದಿರವು, ಮಾದರಿ ಜೈನ ಬಸದಿಯಾಗಿದೆ. ಜೈನ ವಾಸ್ತುಶಿಲ್ಪದ ಪ್ರಕಾರ, ಸುತ್ತಲೂ 148 ಆನೆಗಳ ಚಿತ್ರ, ಗರ್ಭಗುಡಿಯ ಸುತ್ತ ಸಮೋಸರ್ಗದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಒಂದು ವಾರದ ಕಾರ್ಯಕ್ರಮದಲ್ಲಿ ಜೈನ ಮುನಿಗಳು, ದೇಶದ ವಿವಿಧೆಡೆಯ ಜೈನ ಭಕ್ತರು ಭಾಗವಹಿಸುವರು’ ಎಂದರು.

ಪ್ರತಿಕ್ರಿಯಿಸಿ (+)