ಶುಕ್ರವಾರ, ಡಿಸೆಂಬರ್ 6, 2019
26 °C

ಮಧ್ಯ ಪ್ರದೇಶದಲ್ಲಿ ನದಿಗೆ ಉರುಳಿದ ಮದುವೆ ದಿಬ್ಬಣ; 21 ಸಾವು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮಧ್ಯ ಪ್ರದೇಶದಲ್ಲಿ ನದಿಗೆ ಉರುಳಿದ ಮದುವೆ ದಿಬ್ಬಣ; 21 ಸಾವು

ಭೋಪಾಲ್‌: ಮಧ್ಯ ಪ್ರದೇಶದ ಸಿಧಿ ಜಿಲ್ಲೆಯಲ್ಲಿ ಮಿನಿಟ್ರಕ್‌ವೊಂದು ನದಿಗೆ ಉರುಳಿ 21 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಅಮೆಲಿಯಾ ಗ್ರಾಮದ ಸಮೀಪ ಮಂಗಳವಾರ ರಾತ್ರಿ ಸೇತುವೆ ಮೇಲಿಂದ ಸೋನೆ ನದಿಗೆ ಮಿನಿಟ್ರಕ್‌ ಉರುಳಿದೆ. ಮದುವೆ ಸಂಭ್ರಮದಲ್ಲಿದ್ದವರು ಸಿಂಗ್ರೌಲಿ ಜಿಲ್ಲೆಯಿಂದ ಸಿಧಿ ಕಡೆಗೆ ಮಿನಿಟ್ರಕ್‌ನಲ್ಲಿ ಪ್ರಯಾಣ ಬೆಳೆಸಿದ್ದರು. ದಿಬ್ಬಣದಲ್ಲಿದ್ದ 45 ಜನರ ಪೈಕಿ 21 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಹರಬಿರ್ಜಿ ಗ್ರಾಮದ ಮುಜಾಬಿಲ್‌ ಖಾನ್‌ ದಿಬ್ಬಣ ಸಿಧಿಯ ಪಮಾರಿಯಾ ಗ್ರಾಮಕ್ಕೆ ಔತಣಕ್ಕಾಗಿ ಪ್ರಯಾಣಿಸುತ್ತಿತ್ತು. ರಾತ್ರಿ 9:30ರ ಸುಮಾರಿಗೆ ಟ್ರಕ್‌ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ತಡೆ ಕಂಬಿಗಳನ್ನು ಮುರಿದು 100 ಅಡಿಗಳಷ್ಟು ಕೆಳಗೆ ಉರುಳಿದೆ.

ರಕ್ಷಣಾ ಕಾರ್ಯಾಚರಣೆ ನಡೆಸಿದ ಪೊಲೀಸರು ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಮೃತರ ಕುಟುಂಬಗಳಿಗೆ ₹2 ಲಕ್ಷ ಹಾಗೂ ಗಾಯಗೊಂಡಿರುವವರಿಗೆ ₹50 ಸಾವಿರ ಪರಿಹಾರ ಮೊತ್ತು ಘೋಷಿಸಿದ್ದಾರೆ.

ಪ್ರತಿಕ್ರಿಯಿಸಿ (+)