ಶುಕ್ರವಾರ, ಡಿಸೆಂಬರ್ 13, 2019
19 °C
ಸುರಿದ ಮಳೆ: ಕಾಮಗಾರಿ ಗುಂಡಿಯಲ್ಲಿ ನೀರು

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತೊಂದರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತೊಂದರೆ

ಪಡುಬಿದ್ರಿ: ಪಡುಬಿದ್ರಿಯಲ್ಲಿ ಸೋಮವಾರ ಸುರಿದ ಮಳೆ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ತೊಂದರೆ ಅನುಭವಿಸುವಂತಾಗಿದೆ.

ಪಡುಬಿದ್ರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ಹೆದ್ದಾರಿಯಲ್ಲಿ ಅಲ್ಲಲ್ಲಿ ಅಗೆದು ಹಾಕಿದ ಪರಿಣಾಮ ಅದರಲ್ಲಿ ನೀರು ತುಂಬಿ ಸಾರ್ವಜನಿಕರು ಸಂಚಾರಕ್ಕೆ ತೊಂದರೆ ಅನುಭವಿಸಿದರು. ಕೆಲವೆಡೆ ಹೆದ್ದಾರಿಗೆ ಹಾಕಿದ ಮಣ್ಣು ನೀರಿನಲ್ಲಿ ಕೊಚ್ಚಿಕೊಂಡು ಹೋದ ಪರಿಣಾಮ ಮನೆ ಹಾಗೂ ಅಂಗಡಿಗಳಿಗೆ ಕೆಸರು ನುಗ್ಗಿದೆ. ನೀರು ಹರಿಯಲು ಸಮರ್ಪಕವಾಗಿ ಅವಕಾಶವಿಲ್ಲದೆ ಹೆದ್ದಾರಿ ಕಾಮಗಾರಿಗೂ ಅನಾನುಕೂಲವಾಗಿದೆ.

ಪಡುಬಿದ್ರಿಯ ಶ್ರೀಮಹಾಲಿಂಗೇಶ್ವರ ದೇವಳದ ದ್ವಾರದ ಬಳಿ ಕಿರು ಸೇತುವೆ ನಿರ್ಮಾಣವಾಗುತಿದ್ದು, ಕಿರು ಸೇತುವೆ ನಿರ್ಮಾಣಕ್ಕಾಗಿ ಹೊಂಡ ಅಗೆದಿದ್ದು. ಇದರಲ್ಲಿ ತುಂಬಿರುವ ನೀರನ್ನು ಮೇಲೆತ್ತಿ ಕಾಮಗಾರಿ ನಡೆಸಲು ಕಾರ್ಮಿಕರು ಹರಸಾಹಸ ಪಟ್ಟರು.

ಮಳೆಯ ನೀರು ಹೋಗಲು ಚರಂಡಿಯ ವ್ಯವಸ್ಥೆ ಇಲ್ಲದೆ ಪೇಟೆಯಲ್ಲಿ ಹೆದ್ದಾರಿಯಲ್ಲಿಯೇ ನೀರು ತುಂಬಿದ್ದು, ಸಾರ್ವಜನಿಕರು ನಡೆದಾಡಲು ಶ್ರಮಪಡಬೇಕಾಯಿತು. ಹೆದ್ದಾರಿ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಾರ್ವಜನಿಕರು ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದ ನವಯುಗ ಕಂಪೆನಿಯು ನಿಧಾನಗತಿಯಲ್ಲಿ ಕಾಮಗಾರಿ ನಡೆಸುತಿದ್ದು, ಶೀಘ್ರ ಕಾಮಗಾರಿ ಮುಗಿಸುವಂತೆ ಆಗ್ರಹಿಸಿದ್ದಾರೆ. ಮುಂದೆ ಮಳೆಗಾಲ ಆರಂಭವಾಗಲಿದ್ದು, ಇದರ ಒಳಗಾಗಿ ಕಾಮಗಾರಿ ಮುಗಿಸುವಂತೆ ಸುರೇಶ್ ಪಡುಬಿದ್ರಿ ಆಗ್ರಹಿಸಿದ್ದಾರೆ.

 

ಪ್ರತಿಕ್ರಿಯಿಸಿ (+)