ಲಿಂಗಸುಗೂರು ತಾಲ್ಲೂಕು ಅಮರವತಿ ಕ್ರಾಸ್ ಬಳಿ ಮದುವೆ ದಿಬ್ಬಣದ ಟ್ರ್ಯಾಕ್ಟರ್ ಪಲ್ಟಿ; 30 ಜನರಿಗೆ ಗಾಯ

ಸೋಮವಾರ, ಮಾರ್ಚ್ 25, 2019
28 °C

ಲಿಂಗಸುಗೂರು ತಾಲ್ಲೂಕು ಅಮರವತಿ ಕ್ರಾಸ್ ಬಳಿ ಮದುವೆ ದಿಬ್ಬಣದ ಟ್ರ್ಯಾಕ್ಟರ್ ಪಲ್ಟಿ; 30 ಜನರಿಗೆ ಗಾಯ

Published:
Updated:
ಲಿಂಗಸುಗೂರು ತಾಲ್ಲೂಕು ಅಮರವತಿ ಕ್ರಾಸ್ ಬಳಿ ಮದುವೆ ದಿಬ್ಬಣದ ಟ್ರ್ಯಾಕ್ಟರ್ ಪಲ್ಟಿ; 30 ಜನರಿಗೆ ಗಾಯ

ರಾಯಚೂರು: ಮದುವೆ ದಿಬ್ಬಣದ ಟ್ರ್ಯಾಕ್ಟರ್ ಪಲ್ಟಿಯಾಗಿ ಸುಮಾರು 30 ಜನ ಗಾಯಗೊಂಡ ಘಟನೆ ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಅಮರವತಿ ಕ್ರಾಸ್ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.

ಪಾಮನಕಲ್ಲೂರು ಶ್ರೀಆದಿಬಸವೇಶ್ವರ ದೇವಸ್ಥಾನದಲ್ಲಿನ ಸಾಮೂಹಿಕ ವಿವಾಹ ಮುಗಿಸಿಕೊಂಡು ಮರಳಿ ಊರಿಗೆ ಹೋಗುವಾಗ ಘಟನೆ ಸಂಭವಿಸಿದೆ.

ಲಿಂಗಸುಗೂರು ತಾಲ್ಲೂಕಿನ ಹಳ್ಳಿಯಿಂದ ಮದುವೆಗೆ ಬಂದಿದ್ದವರು ಊರಿಗೆ ಹಿಂದಿರುಗುವಾಗ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ ಪಲ್ಟಿಯಾಗಿದೆ.

ಟ್ರ್ಯಾಕ್ಟರ್‌ನಲ್ಲಿದ್ದ ಸುಮಾರು 30 ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಲಿಂಗಸುಗೂರಿನ ತಾಲ್ಲೂಕು ಆಸ್ಪತ್ರೆಗೆ ಕಳಹಿಸಿಕೊಡಲಾಗಿದೆ.

ಘಟನಾ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry