ಶನಿವಾರ, ಡಿಸೆಂಬರ್ 7, 2019
25 °C

‘ನಿಡುಮಾಮಿಡಿ ಮಠಕ್ಕೆ ದಲಿತ ಪೀಠಾಧ್ಯಕ್ಷ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಿಡುಮಾಮಿಡಿ ಮಠಕ್ಕೆ ದಲಿತ ಪೀಠಾಧ್ಯಕ್ಷ’

ಮೈಸೂರು: ನಿಡುಮಾಮಿಡಿ ಮಹಾಸಂಸ್ಥಾನ ಮಠದ ಮುಂದಿನ ಪೀಠಾಧ್ಯಕ್ಷರನ್ನಾಗಿ ದಲಿತರೊಬ್ಬರನ್ನು ನೇಮಿಸಲಾಗುವುದು ಎಂದು ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಇಲ್ಲಿ ಬುಧವಾರ ತಿಳಿಸಿದರು.

ಉರಿಲಿಂಗಪೆದ್ದೀಶ್ವರ ಸಂಸ್ಥಾನ ಶಾಖಾ ಮಠ ಹಮ್ಮಿಕೊಂಡಿದ್ದ ಮಠದ ನವೀಕೃತ ಕಟ್ಟಡದ ಉದ್ಘಾಟನೆ ಹಾಗೂ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದ ಕೆಳಸ್ತರಕ್ಕೆ ಸೇರಿದ್ದ ಅಲ್ಲಮಪ್ರಭು ಅವರನ್ನು ಶೂನ್ಯಸಿಂಹಾಸನದ ಪೀಠಾಧ್ಯಕ್ಷರನ್ನಾಗಿ ನೇಮಿಸಿದ್ದರು. ಇದನ್ನು ಮಾದರಿಯಾಗಿಟ್ಟುಕೊಂಡ ಉರಿಲಿಂಗಪೆದ್ದೀಶ್ವರ ಮಠವು ಅಂದಿನ ಕಾಲದಲ್ಲಿ ದಲಿತರನ್ನು ಪೀಠಾಧ್ಯಕ್ಷರನ್ನಾಗಿ ನೇಮಿಸಿತ್ತು. ಇದಾದ ಬಳಿಕ ಯಾವ ಲಿಂಗಾಯತ–ವೀರಶೈವ ಮಠವೂ ದಲಿತರನ್ನು ನೇಮಿಸಿಲ್ಲ. ಈ ಕೆಲಸವನ್ನು ನಿಡುಮಾಮಿಡಿ ಮಠ ಮಾಡಲಿದೆ. ದಲಿತರಿಗೆ ಪೀಠಾಧ್ಯಕ್ಷ ಸ್ಥಾನ ಮೀಸಲಿಡಲಿದೆ’ ಎಂದರು.

ಪ್ರತಿಕ್ರಿಯಿಸಿ (+)