ರೈತರಿಗೆ ಗೊಬ್ಬರ ಉಚಿತ

7

ರೈತರಿಗೆ ಗೊಬ್ಬರ ಉಚಿತ

Published:
Updated:
ರೈತರಿಗೆ ಗೊಬ್ಬರ ಉಚಿತ

ಬೆಂಗಳೂರು: ದಾಸನಪುರ ಹೋಬಳಿಯ ವಡೇರಹಳ್ಳಿ ಗ್ರಾಮದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಂಸ್ಥೆಯು ರೈತರಿಗೆ ಗೊಬ್ಬರ ಉಚಿತ ನೀಡುವ ಯೋಜನೆ ರೂಪಿಸಿದೆ.

‘ಆಲೂಗಡ್ಡೆ, ಈರುಳ್ಳಿಯ ಸಿಪ್ಪೆಯನ್ನು ಗೊಬ್ಬರವಾಗಿ ಪರಿವರ್ತಿಸುವ ಯಂತ್ರವನ್ನು ಜರ್ಮನಿಯಿಂದ ₹1.60 ಕೋಟಿಗೆ ಖರೀದಿಸಲಾಗಿದೆ. ಯಂತ್ರವನ್ನು ಎಪಿಎಂಸಿ ಯಾರ್ಡ್‌ ಆವರಣದಲ್ಲಿ ಅಳವಡಿಸಿದ್ದು, ಇನ್ನೆರಡು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ’ ಎಂದು ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ತಿಳಿಸಿದರು.

‘ಕೃಷಿ ಉತ್ಪನ್ನ ಮಾರುಕಟ್ಟೆ ಸಂಸ್ಥೆಯಲ್ಲಿರುವ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು. ಲಾಟರಿ ಮೂಲಕ ರೈತರ ಹೆಸರನ್ನು ಅಯ್ಕೆ ಮಾಡಲಾಗುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry