ಭಾರತದ ಸಿಖ್‌ ಯುವತಿ ಮುಸ್ಲಿಂ ಧರ್ಮಕ್ಕೆ ಮತಾಂತರ

7

ಭಾರತದ ಸಿಖ್‌ ಯುವತಿ ಮುಸ್ಲಿಂ ಧರ್ಮಕ್ಕೆ ಮತಾಂತರ

Published:
Updated:
ಭಾರತದ ಸಿಖ್‌ ಯುವತಿ ಮುಸ್ಲಿಂ ಧರ್ಮಕ್ಕೆ ಮತಾಂತರ

ಇಸ್ಲಾಮಾಬಾದ್‌: ‘ಬೈಸಾಕಿ’ ಹಬ್ಬದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ತೆರಳಿದ್ದ ಭಾರತದ ಸಿಖ್‌ ಯುವತಿ ಲಾಹೋರ್‌ನ ವರನನ್ನು ಮದುವೆಯಾಗಿ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇದೀಗ ವೀಸಾ ಅವಧಿಯನ್ನು ವಿಸ್ತರಿಸಬೇಕು ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ’ ಎಂದು ಮಾಧ್ಯಮವೊಂದು ವರದಿ ಮಾಡಿದೆ.

‘ಪಂಜಾಬ್‌ನ ಹೋಷಿಯಾರ್‌ಪುರ ಜಿಲ್ಲೆಯ ಮನೋಹರ್‌ಲಾಲ್‌ ಮಗಳು ಕಿರಣ್‌ ಬಾಲಾ ಇಲ್ಲಿನ ನಿವಾಸಿ ಮೊಹಮ್ಮದ್‌ ಅಜಮ್‌ ಅವರನ್ನು ಮದುವೆಯಾಗಿದ್ದಾರೆ. ಏಪ್ರಿಲ್‌ 16ರಂದು ಲಾಹೋರ್‌ನ ಜಾಮಿಯಾ ನಯಿಮಿಯಾ ಸೆಮಿನರಿಯಲ್ಲಿ ಮದುವೆ ನಡೆದಿದೆ. ಹೀಗಾಗಿ, ಅವರ ವೀಸಾವನ್ನು ವಿಸ್ತರಿಸಬೇಕು’ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯು ಭಾರತಕ್ಕೆ ಪತ್ರ ಬರೆದಿದೆ ಎಂದು ‘ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ವರದಿ ಮಾಡಿದೆ.

ಮದುವೆ ಬಳಿಕ ಯುವತಿ ‘ಅಮ್ನಾ ಬೀಬಿ’ ಎಂದು ಹೆಸರು ಬದಲಾಯಿಸಿಕೊಂಡಿದ್ದು, ಹೊಸ ಹೆಸರಿನ ಸಹಿಯೊಂದಿಗೆ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

‘ಕೆಲವೊಂದು ಕಾರಣಗಳಿಂದ ಭಾರತಕ್ಕೆ ಹಿಂತಿರುಗುವುದಿಲ್ಲ. ಹತ್ಯೆ ಮಾಡುವುದಾಗಿ ಕೆಲವರು ಬೆದರಿಕೆ ಒಡ್ಡಿರುವುದರಿಂದ ವೀಸಾವನ್ನು ವಿಸ್ತರಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಪತ್ರದ ಕುರಿತಂತೆ ಭಾರತದ ರಾಯಭಾರ ಕಚೇರಿ ಹಾಗೂ ವಿದೇಶಾಂಗ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇಸ್ಲಾಮಾಬಾದ್‌ನ ಹಸನ್‌ ಅಬ್ದಾಲ್‌ನಲ್ಲಿರುವ ಗುರುದ್ವಾರ ಪಂಜಾ ಸಾಹಿಬ್‌ನಲ್ಲಿ ನಡೆದ ‘ಬೈಸಾಕಿ’ ಉತ್ಸವದಲ್ಲಿ ಪಾಲ್ಗೊಳ್ಳಲು ಇತರೆ ಭಕ್ತಾದಿಗಳ ಜೊತೆ ಯುವತಿಯು ಏಪ್ರಿಲ್‌ 12ರಂದು ಪಾಕಿಸ್ತಾನಕ್ಕೆ ಬಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry