ಬಿಎಫ್‌ಸಿಗೆ ಪ್ರಶಸ್ತಿ ಕನಸು

7
ಐದನೇ ಕಿರೀಟ ತೊಡಿಸುವ ಗುರಿಯಲ್ಲಿ ರೋಕಾ; ಜುವಾನ್‌, ಭೆಕೆ ಕಣಕ್ಕಿಳಿಯುವ ಸಾಧ್ಯತೆ

ಬಿಎಫ್‌ಸಿಗೆ ಪ್ರಶಸ್ತಿ ಕನಸು

Published:
Updated:
ಬಿಎಫ್‌ಸಿಗೆ ಪ್ರಶಸ್ತಿ ಕನಸು

ಭುವನೇಶ್ವರ: ಇಂಡಿಯನ್‌ ಸೂಪರ್ ಲೀಗ್‌ನ ಫೈನಲ್‌ನಲ್ಲಿ ಮುಗ್ಗರಿಸಿ ಪ್ರಶಸ್ತಿ ಕೈಚೆಲ್ಲಿದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡ ಸೂಪರ್ ಕಪ್ ಫುಟ್‌ಬಾಲ್‌ ಟೂರ್ನಿಯ ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ಶುಕ್ರವಾರ ಕಣಕ್ಕೆ ಇಳಿಯಲಿದೆ.

ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಸಂಜೆ ನಡೆಯಲಿರುವ ಫೈನಲ್‍ನಲ್ಲಿ ಬಿಎಫ್‍ಸಿ ತಂಡ ಈಸ್ಟ್ ಬೆಂಗಾಲ್ ವಿರುದ್ಧ ಸೆಣಸಲಿದೆ. ಈಸ್ಟ್‌ ಬೆಂಗಾಲ್‌ ವಿರುದ್ಧ ಗೆದ್ದರೆ ಬಿಎಫ್‌ಸಿ ಮಹತ್ವದ ಟೂರ್ನಿಗಳಲ್ಲಿ ಐದನೇ ಪ್ರಶಸ್ತಿ ಗೆದ್ದ ಸಾಧನೆ ತನ್ನದಾಗಿಸಿಕೊಳ್ಳಲಿದೆ.

ಟೂರ್ನಿಯ ಎಲ್ಲ ಪಂದ್ಯಗಳಲ್ಲೂ ಬಿಎಫ್‍ಸಿ ಉತ್ತಮ ಆಟ ಆಡಿದೆ. ಪ್ರಿ ಕ್ವಾರ್ಟರ್ ಫೈನಲ್‍ನಲ್ಲಿ ಕೇರಳ ಎಫ್‍ಸಿ ವಿರುದ್ಧ 2-1ರಲ್ಲಿ ಗೆದ್ದ ತಂಟ ಕ್ವಾರ್ಟರ್ ಫೈನಲ್‍ನಲ್ಲಿ ನೆರೊಕಾವನ್ನು 3-1ರಿಂದ ಸೋಲಿಸಿತ್ತು. ನಾಲ್ಕರ ಘಟ್ಟದಲ್ಲಿ ಮೋಹನ್ ಬಾಗನ್ ವಿರುದ್ಧ 4-2 ಅಂತರದ ಜಯ ಸಾಧಿಸಿತ್ತು.

ಬಲಿಷ್ಠ ಈಸ್ಟ್‌ ಬೆಂಗಾಲ್‌: ಈಸ್ಟ್ ಬೆಂಗಾಲ್ ಕೂಡ ವಿವಿಧ ಸವಾಲುಗಳನ್ನು ಮೆಟ್ಟಿ ನಿಂತು ಪ್ರಶಸ್ತಿ ಹಂತಕ್ಕೆ ತಲುಪಿದೆ. ಪ್ರಿ ಕ್ವಾರ್ಟರ್ ಫೈನಲ್‍ನಲ್ಲಿ ಮುಂಬೈ ಸಿಟಿ ಎಫ್‍ಸಿ ವಿರುದ್ಧ 2-1ರಿಂದ ಗೆದ್ದು, ಕ್ವಾರ್ಟರ್ ಫೈನಲ್‌ನಲ್ಲಿ ಐಜ್ವಾಲ್ ಎಫ್‍ಸಿ ವಿರುದ್ಧ 1-0 ಅಂತರದಿಂದ ಗೆದ್ದಿದೆ. ಸೆಮಿಫೈನಲ್‍ನಲ್ಲಿ ಎಫ್‍ಸಿ ಗೋವಾವನ್ನು ಮಣಿಸಿದೆ.

ಪಂದ್ಯದಲ್ಲಿ ತಂಡ ಸುಲಭ ಜಯ ಸಾಧಿಸಲಿದೆ ಎಂದು ಬಿಎಫ್‌ಸಿ ಕೋಚ್ ಆಲ್ಬರ್ಟ್ ರೋಕಾ ಭರವಸೆ ವ್ಯಕ್ತಪಡಿಸಿದ್ದಾರೆ.

‘ಐಎಸ್‍ಎಲ್‌ ಫೈನಲ್‌ನಲ್ಲಿ ಸೋತಿ ರುವುದು ತಂಡಕ್ಕೆ ತೀವ್ರ ನಿರಾಸೆ  ಉಂಟುಮಾಡಿದೆ. ಆ ನೋವನ್ನು ಮರೆಯಲು ಈಗ ಅವಕಾಶ ಒದಗಿದೆ. ಸೂಪರ್ ಕಪ್ ಫೈನಲ್‌ನಲ್ಲಿ ತಂಡ ಉತ್ತಮ ಸಾಮರ್ಥ್ಯ ತೋರಲಿದೆ’ ಎಂದು ರೋಕಾ ಹೇಳಿದ್ದಾರೆ.

ಗಾಯಗೊಂಡು ಕಳೆದ ಪಂದ್ಯದಲ್ಲಿ ಹೊರಗುಳಿದಿದ್ದ ಡಿಫೆಂಡರ್‍ಗಳಾದ ಜುವಾನ್ ಗೋನ್ಜಲ್ವಜ್ ಮತ್ತು ರಾಹುಲ್ ಭೆಕೆ ಶುಕ್ರವಾರದ ಪಂದ್ಯಕ್ಕೆ ಲಭ್ಯರಿರುವುದು ತಂಡದ ಭರವಸೆಯನ್ನು ಹೆಚ್ಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry