ಭಾರತ ಟಿಟಿ ಕ್ರೀಡೆಯ ಚುಕ್ಕಾಣಿ ಮಣಿಕಾಗೆ

7

ಭಾರತ ಟಿಟಿ ಕ್ರೀಡೆಯ ಚುಕ್ಕಾಣಿ ಮಣಿಕಾಗೆ

Published:
Updated:
ಭಾರತ ಟಿಟಿ ಕ್ರೀಡೆಯ ಚುಕ್ಕಾಣಿ ಮಣಿಕಾಗೆ

ನವದೆಹಲಿ: ‘ನನ್ನ ಹೆಗಲ ಮೇಲಿದ್ದ ಭಾರವನ್ನು ಇನ್ನೂ ಮುಂದೆ ಮಣಿಕಾ ಬಾತ್ರಾ ಅವರು ಹೊರಲಿದ್ದಾರೆ. ಟೇಬಲ್‌ ಟೆನಿಸ್‌ನಲ್ಲಿ ಅವರ ಸಾಧನೆ ನನಗೆ ಸಂತಸ ತಂದಿದೆ. ಹಾಗಾಗಿ, ಇನ್ನೂ ಮುಂದೆ ಆ ಕ್ರೀಡೆಯ ಚುಕ್ಕಾಣಿ ಅವರಯ’ ಎಂದು ಟೇಬಲ್‌ ಟೆನಿಸ್‌ ಪಟು ಶರತ್‌ ಕಮಲ್‌ ಹೇಳಿದ್ದಾರೆ.

‘ಮಣಿಕಾ ಸಾಧನೆ ಅಸಾಧಾರಣ. ಜನರಲ್ಲಿ ಈ ಕ್ರೀಡೆಯ ಬಗ್ಗೆ ಹೆಚ್ಚಿನ ಉತ್ಸಾಹ ಹಾಗೂ ಆಸಕ್ತಿ ಬರುವಂತೆ ಮಾಡುವ ಹಾಗೂ ಯುವ ಆಟಗಾರಿಗೆ ಉತ್ತೇಜನ ನೀಡುವ ಜವಾಬ್ದಾರಿ ಇನ್ನೂ ನಿನ್ನ ಮೇಲಿದೆ ಎಂದು ಆಕೆಗೆ ಕ್ರೀಡಾಕೂಟದ ಕೊನೆಯ ದಿನ ಹೇಳಿದ್ದೆ. 10 ವರ್ಷಗಳಲ್ಲಿ ಈ ಕ್ರೀಡೆಯ ಬೆಳವಣಿಯಲ್ಲಿ ನನ್ನದೂ ಅಲ್ಪ ಪಾತ್ರವಿದೆ’ ಎಂದು ಅವರು ಹೇಳಿದ್ದಾರೆ.

‘ಫೆಂಗ್‌ ಅವರು ಜಗತ್ತಿನ ಶ್ರೇಷ್ಠ ಟೇಬಲ್‌ ಟೆನಿಸ್‌ ಕ್ರೀಡಾಪಟು. ನಾಲ್ಕನೇ ಕ್ರಮಾಂಕದ ಅವರನ್ನು ಎರಡು ಬಾರಿ ಸೋಲಿಸಿದ್ದು ಕಡಿಮೆ ಸಾಧನೆಯಲ್ಲ. ಪ್ರತಿ ಪಂದ್ಯದ ನಂತರ ಮಣಿಕಾ ತನ್ನ ಸಾಮರ್ಥ್ಯ ಹೆಚ್ಚು ಮಾಡಿಕೊಂಡಿದ್ದು ಆಕೆಯಲ್ಲಿನ ಉತ್ಸಾಹ ತೋರಿಸುತ್ತದೆ’ ಎಂದು ಅವರು ತಿಳಿಸಿದ್ದಾರೆ.

‘ಕಾಮನ್‌ವೆಲ್ತ್‌ ಕೂಟದಲ್ಲಿ ಮೂರು ಪದಕಗಳನ್ನು ಜಯಿಸಿದ್ದು ನನ್ನಲ್ಲಿನ ಆತ್ಮವಿಶ್ವಾಸವನ್ನು ದ್ವಿಗುಣಗೊಳಿಸಿದೆ. ಇದರಿಂದಾಗಿ ಇನ್ನೂ ನಾಲ್ಕು ವರ್ಷಗಳ ಕಾಲ ಆಟವಾಡುವ ಹುಮ್ಮಸ್ಸು ಬಂದಿದೆ’ ಎಂದೂ ತಿಳಿಸಿದ್ದಾರೆ. ‘ಗೋಲ್ಡ್‌ ಕೋಸ್ಟ್‌ನಲ್ಲಿ ಬಹಳಷ್ಟು ಕೋಚ್‌ಗಳು ಹಾಗೂ ಕ್ರೀಡಾಪಟುಗಳು ನನ್ನ ಆಟವನ್ನು ಶ್ಲಾಘಿಸಿದರು. ಉತ್ತಮವಾಗಿ ಆಡುತ್ತಿರುವುದರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ಮುಂದಿನ ಕಾಮನ್‌ವೆಲ್ತ್‌ನಲ್ಲೂ ಸ್ಪರ್ಧಿಸಬೇಕು ಎಂದು ಅವರೆಲ್ಲ ಹೇಳಿದ್ದರು. ಆ ಬಗ್ಗೆ ಇನ್ನೊಮ್ಮೆ ಯೋಚಿಸುತ್ತೇನೆ’ ಎಂದೂ ತಿಳಿಸಿದ್ದಾರೆ.

ಕಾಮನ್‌ವೆಲ್ತ್‌ ಕೂಟದಲ್ಲಿ ಮಣಿಕಾ ಅವರು ನಾಲ್ಕು ಪದಕಗಳನ್ನು ಗೆದ್ದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry