‘ಯಾವುದೇ ಮೊತ್ತ ಸವಾಲಿನದ್ದಲ್ಲ’: ರಾಬಿನ್ ಉತ್ತಪ್ಪ

7

‘ಯಾವುದೇ ಮೊತ್ತ ಸವಾಲಿನದ್ದಲ್ಲ’: ರಾಬಿನ್ ಉತ್ತಪ್ಪ

Published:
Updated:
‘ಯಾವುದೇ ಮೊತ್ತ ಸವಾಲಿನದ್ದಲ್ಲ’: ರಾಬಿನ್ ಉತ್ತಪ್ಪ

ಜೈಪುರ: ‘ಕ್ರಿಕೆಟ್ ಈಗ ಸಾಕಷ್ಟು ಬದಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಯಾವುದೇ ಮೊತ್ತ ಸವಾಲಿನದ್ದಲ್ಲ. ಎದುರಾಳಿಗಳು ಎಷ್ಟು ರನ್ ಕಲೆ ಹಾಕಿದರೂ ಬೆನ್ನತ್ತಿ ಗೆಲ್ಲುವುದು ಕಷ್ಟವಲ್ಲ’ ಎಂದು ಕೋಲ್ಕತ್ತ ನೈಟ್ ರೈಡರ್ಸ್‌ನ ಬ್ಯಾಟ್ಸ್‌ಮನ್‌ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟರು.

ಬುಧವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಪ್ಪ 48 ರನ್‌ ಗಳಿಸಿದ್ದರು. 160 ರನ್‌ಗಳ ಗುರಿ ಬೆನ್ನತ್ತಿದ ಕೋಲ್ಕತ್ತ ಏಳು ವಿಕೆಟ್‌ಗಳಿಂದ ಗೆದ್ದಿತ್ತು.

‘ಕ್ರಿಕೆಟ್‌ನಲ್ಲಿ ಈಗ ತಂತ್ರಗಳಿಗಿಂತ ಶಕ್ತಿಯೇ ಪ್ರಮುಖವಾಗುತ್ತದೆ. ಬ್ಯಾಟಿಂಗ್ ಬಲ ಇರುವ ತಂಡಗಳಿಗೆ ಎಂಥ ಮೊತ್ತವೂ ಸುಲಭವಾಗುತ್ತದೆ’ ಎಂದು ಅವರು ಹೇಳಿದರು.

‘ಕೆಕೆಆರ್ ಈ ಬಾರಿ ಉತ್ತಮ ಆಟ ಆಡುತ್ತಿದೆ. ಈಗಾಗಲೇ ಐದು ಪಂದ್ಯಗಳಲ್ಲಿ ಮೂರನ್ನು ಗೆದ್ದಿದ್ದು ಪಾಯಿಂಟ್‌ ಪಟ್ಟಿಯ ಅಗ್ರಸ್ಥಾನದಲ್ಲಿದೆ. ಇದು ಖುಷಿ ತಂದಿದೆ. ದೇಶಿ ಟೂರ್ನಿಗಳಲ್ಲಿ ಲಯ ಕಂಡುಕೊಳ್ಳಲು ಸಾಧ್ಯವಾಗದಿದ್ದರೂ ಈ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಮಾಡಲು ಆಗುತ್ತಿದೆ. ಇದು ಕೂಡ ಸಂತಸದ ವಿಷಯ’ ಎಂದು ಉತ್ತಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry