‘ಬಿ.ಜೆ.ಪಿ. ದೂಳಿಪಟ’

7

‘ಬಿ.ಜೆ.ಪಿ. ದೂಳಿಪಟ’

Published:
Updated:
‘ಬಿ.ಜೆ.ಪಿ. ದೂಳಿಪಟ’

ಬೆಂಗಳೂರು: ‘ಬಿ.ಜೆ.ಪಿ.ಯನ್ನು ಸೋಲಿಸಲು ನಾವು ಟೊಂಕ ಕಟ್ಟಿ ನಿಂತಿದ್ದೀವಿ. ಕಾಂಗ್ರೇಸ್‍ನ ಎಲ್ಲ ನಾಯಕರು ಇಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ. ನಮ್ಮ ಯಾರಲ್ಲಿಯೂ ಭಿನ್ನಾಭಿಪ್ರಾಯಗಳು ಇಲ್ಲ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಗೋಪಾಲ ಕೃಷ್ಣ ಹೇಳಿದರು.

ಹೆಸರಘಟ್ಟದ ಟಿ.ಬಿ.ಕ್ರಾಸ್‍ ಬಳಿ ಏರ್ಪಾಡಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ವಿಧಾನಸಭಾ ಪರಿಷತ್ತು ಸದಸ್ಯರಾದ ನಾರಾಯಣಾ ಸ್ವಾಮಿ, ‘ಹೆಸರಘಟ್ಟ ಮತ್ತು ದಾಸನಪುರ ಹೋಬಳಿಗಳಿಗೆ ಸರ್ಕಾರದಿಂದ ಅನೇಕ ಅನುದಾನಗಳನ್ನು ತಂದು, ಕೆಲಸ ಮಾಡಿಸಿದ್ದೀವಿ. ಮತ್ತೂರು, ಹೆಸರಘಟ್ಟ, ಕೊಡಗಿ ತಿರುಮಲಾಪುರ ಗ್ರಾಮಗಳ ರಸ್ತೆ ಕಾಮಗಾರಿ ಪ್ರಗತಿಯ ಹಂತದಲ್ಲಿದೆ. ಇದಕ್ಕೆ ₹3 ಕೋಟಿಗಳನ್ನು ಖರ್ಚು ಮಾಡಲಾಗಿದೆ’ ಎಂದು ತಿಳಿಸಿದರು.

‘ಹೆಸರಘಟ್ಟದಲ್ಲಿ ₹116 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಮಾಡಲಾಗುತ್ತಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry