ಘಟಾನುಘಟಿಗಳ ಉಮೇದುವಾರಿಕೆ

7

ಘಟಾನುಘಟಿಗಳ ಉಮೇದುವಾರಿಕೆ

Published:
Updated:

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಕಣ ರಂಗೇರಿದ್ದು, ಘಟಾನುಘಟಿ ನಾಯಕರು ಗುರುವಾರ ನಾಮಪತ್ರ ಸಲ್ಲಿಸಿದರು.

ಉಮೇದುವಾರಿಕೆ ಸಲ್ಲಿಕೆಗೆ ಮೊದಲ ದಿನವಾದ ಮಂಗಳವಾರ ಬೆರಳೆಣಿಕೆಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಗುರುವಾರ ನಾಮಪತ್ರಗಳ ‘ಮಹಾಪೂರ’ವೇ ಹರಿದು ಬಂದಿದೆ. ಅದಕ್ಕೆ ಮುನ್ನ ಅಭ್ಯರ್ಥಿಗಳು ನೂರಾರು ಬೆಂಬಲಿಗರ ಜತೆಗೆ ಮೆರವಣಿಗೆಯಲ್ಲಿ ಸಾಗಿ ಬಂದರು. ಜತೆಗೆ, ತಮ್ಮ ‘ಐಶ್ವರ್ಯ’ವನ್ನೂ ಬಹಿರಂಗಪಡಿಸಿದರು. ಕೆಲವೇ ಲಕ್ಷಗಳ ಆಸ್ತಿ ಮಾಲೀಕರಿಂದ ಸಾವಿರ ಕೋಟಿ ಮೌಲ್ಯದ ಒಡೆಯರವರೆಗೂ ಆ ಪಟ್ಟಿಯಲ್ಲಿದ್ದರು. 155 ಮಂದಿಯಿಂದ ಉಮೇದುವಾರಿಕೆ ಸಲ್ಲಿಕೆಯಾಗಿದೆ.

ಶಿಕಾರಿಪುರ ಕ್ಷೇತ್ರದಿಂದ ಕಣಕ್ಕೆ ಇಳಿಯಲಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದು ಶಿವಮೊಗ್ಗದಲ್ಲಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಪ್ರಮುಖರು:

* ಬಿ.ಎಸ್‌.ಯಡಿಯೂರಪ್ಪ– ಶಿಕಾರಿಪುರ

* ಕೆ.ಎಸ್‌.ಈಶ್ವರಪ್ಪ– ಶಿವಮೊಗ್ಗ

* ಆರ್‌.ಅಶೋಕ– ಪದ್ಮನಾಭ ನಗರ

* ಡಿ.ಕೆ.ಶಿವಕುಮಾರ್‌– ಕನಕ‍ಪುರ

* ಕೆ.ಆರ್‌.ರಮೇಶ್‌ ಕುಮಾರ್‌– ಶ್ರೀನಿವಾಸಪುರ

* ಎ.ಮಂಜು– ಅರಕಲಗೂಡು

* ಬಿ.ರಮಾನಾಥ ರೈ– ಬಂಟ್ವಾಳ

* ಎಚ್‌.ವಿಶ್ವನಾಥ್‌– ಹುಣಸೂರು‌

* ಪೃಥ್ವಿ ರೆಡ್ಡಿ– ಸರ್ವಜ್ಞ ನಗರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry