ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ವೆಚ್ಚ ವೀಕ್ಷಕರಿಂದ ಕಾರ್ಯಾಚರಣೆ ಆರಂಭ

Last Updated 20 ಏಪ್ರಿಲ್ 2018, 7:58 IST
ಅಕ್ಷರ ಗಾತ್ರ

ಹಾವೇರಿ: ಚುನಾವಣಾ ಆಯೋಗವು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಐ.ಆರ್.ಎಸ್. ಅಧಿಕಾರಿಗಳನ್ನು ಕೇಂದ್ರ ವೆಚ್ಚ ವೀಕ್ಷಕರನ್ನು ನಿಯೋಜನೆ ಮಾಡಿದೆ. ಅವರು ಈಗಾಗಲೇ ಜಿಲ್ಲೆಯಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಕೇಂದ್ರ ವೀಕ್ಷಕರಿಗೆ ಲೈಜನ್ ಅಧಿಕಾರಿಗಳಾಗಿ ತಾರೀಕ್ ಮೆಹಬೂಬ ಅವರಿಗೆ ರೇಷ್ಮೆ ಇಲಾಖೆಯ ಉಪನಿರ್ದೇಶಕ ಮಾಲತೇಶ ಪಾಟೀಲ (ಮೊ:9448223920), ಸುಧೀರ್‌ಕುಮಾರ್ ಅವರಿಗೆ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಆನಂದ ಪಾಲೇಕರ ಹಾಗೂ ಕುಮಾರ್ ಅಸೀಮ್ ವೈಭವ ಅವರಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಶಿವಪುರಪ್ಪ (ಮೊ:9880163211) ಅವರನ್ನು ನೇಮಕ ಮಾಡಲಾಗಿದೆ.

ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಕೇಂದ್ರ ವೀಕ್ಷಕರ ಮೊಬೈಲ್‌ ಸಂಖ್ಯೆಗೆ ಸಂಪರ್ಕಿಸಬಹುದು.ನಿಯೋಜನೆಗೊಂಡ ವೆಚ್ಚ ವೀಕ್ಷಕರು ಮಂಗಳವಾರದಿಂದಲೇ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ. ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಸಿದ್ಧತೆ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಹಾನಗಲ್ ಮತ್ತು ಬ್ಯಾಡಗಿ ವಿಧಾನಸಭಾ ಕ್ಷೇತ್ರಕ್ಕೆ ಸಾಮಾನ್ಯ ವೀಕ್ಷಕರಾಗಿ ಹಿರಿಯ ಐ.ಎ.ಎಸ್. ಅಧಿಕಾರಿಗಳಾದ ನಾಗೇಂದ್ರ ಪ್ರಸಾದ್‌ ಮಿಶ್ರಾ, ಶಿಗ್ಗಾವಿ ಮತ್ತು ಹಾವೇರಿ ಕ್ಷೇತ್ರಕ್ಕೆ ಡಾ.ಸಮೀತ್ ಶರ್ಮಾ, ಹಿರೇಕೆರೂರ ಕ್ಷೇತ್ರಕ್ಕೆ ಜಯಕುಮಾರ ವಿ., ರಾಣೆಬೆನ್ನೂರು ಕ್ಷೇತ್ರಕ್ಕೆ ಮೋಹಿಂದ್ರಪಾಲ್ ಹಾಗೂ ಪೊಲೀಸ್ ವೀಕ್ಷಕರಾಗಿ ಜಿಲ್ಲೆಗೆ ಎಸ್.ಕೆ.ನಾಥ್ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಚುನಾವಣಾ ಅಕ್ರಮಗಳಿಗೆ ಅವಕಾಶ ಇರಬಾರದು. ಸಂಶಯಾಸ್ಪದ ಚಟುವಟಿಕೆಗಳು, ಖಚು ವೆಚ್ಚಗಳ ಕುರಿತು ತೀವ್ರ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಅವರು ಸಲಹೆ ನೀಡಿದ್ದಾರೆ.

ಚುನಾವಣಾ ವೀಕ್ಷಕರ ವಿವರ

ಹಾನಗಲ್, ಶಿಗ್ಗಾವಿ – ತಾರೀಕ್ ಮೆಹಬೂಬ್ –ಮೊ:8277816353
ಹಾವೇರಿ, ಬ್ಯಾಡಗಿ – ಸುಧೀರ್‌ಕುಮಾರ್ –ಮೊ:8277816354
ಹಿರೇಕೆರೂರು, ರಾಣೆಬೆನ್ನೂರು– ಕುಮಾರ್ ಅಸೀಮ್ ವೈಭವ–ಮೊ:8277816341

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT