ಸೂರತ್‌ ಅತ್ಯಾಚಾರ ಪ್ರಕರಣ: ರಾಜಸ್ಥಾನದ ಮೂಲದ ಆರೋಪಿ ಬಂಧನ

7

ಸೂರತ್‌ ಅತ್ಯಾಚಾರ ಪ್ರಕರಣ: ರಾಜಸ್ಥಾನದ ಮೂಲದ ಆರೋಪಿ ಬಂಧನ

Published:
Updated:
ಸೂರತ್‌ ಅತ್ಯಾಚಾರ ಪ್ರಕರಣ: ರಾಜಸ್ಥಾನದ ಮೂಲದ ಆರೋಪಿ ಬಂಧನ

ಅಹಮದಾಬಾದ್‌: ಏಪ್ರಿಲ್‌ 6ರಂದು ಸೂರತ್‌ನಲ್ಲಿ ನಡೆದಿದ್ದ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಗಂಗಾನಗರ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಗುಜರಾತ್‌ ಗೃಹ ಸಚಿವ ಪ್ರದೀಪ್‌ ಸಿನ್ಹ ಜಡೇಜಾ ಹೇಳಿದ್ದಾರೆ.

ಸವಾಯಿ ಮಧೋಪುರ್‌ ಜಿಲ್ಲೆಯ ಗಂಗಾನಗರದಲ್ಲಿ ಸೆರೆಸಿಕ್ಕಿರುವ ಆರೋಪಿಯನ್ನು ಹರ್ಷ್‌ ಸಹಾಯ್‌ ಗುರ್ಜಾರ್‌ ಎಂದು ಗುರುತಿಸಲಾಗಿದೆ. ಬಾಲಕಿಯ ಶವ ಪತ್ತೆಯಾಗಿದ್ದ ಮೂರು–ನಾಲ್ಕು ದಿನಗಳ ಬಳಿಕ ಅದೇ ಪ್ರದೇಶದಲ್ಲಿ ಮತ್ತೊಬ್ಬ ಮಹಿಳೆಯ ಶವ ಪತ್ತೆಯಾಗಿತ್ತು. ಮೃತ ಮಹಿಳೆ ಬಾಲಕಿಯ ತಾಯಿಯಾಗಿರುವ ಸಾಧ್ಯತೆ ಹೆಚ್ಚಾಗಿದೆ.

ಆರೋಪಿ ಇಬ್ಬರನ್ನೂ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದೂ ಜಡೇಜಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry