ಕಳಸಾ ಬಂಡೂರಿ ಹೋರಾಟಗಾರ ಹೆಬಸೂರ ನಾಮಪತ್ರ ಸಲ್ಲಿಕೆ

7

ಕಳಸಾ ಬಂಡೂರಿ ಹೋರಾಟಗಾರ ಹೆಬಸೂರ ನಾಮಪತ್ರ ಸಲ್ಲಿಕೆ

Published:
Updated:

ನವಲಗುಂದ: ಕಳೆದ ಒಂದು ಸಾವಿರ ದಿನದಿಂದ ಮಹದಾಯಿ ಹಾಗು ಕಳಸಾ ಬಂಡೂರಿ ಯೋಜನೆ ಜಾರಿಗಾರಿ ಹೋರಾಟ ನಡೆಸುತ್ತಿರುವ ಪಕ್ಷಾತೀತ ರೈತ ಹೋರಾಟ ಸಮಿತಿಯ ಅಧ್ಯಕ್ಷ ಲೋಕನಾಥ ಹೆಬಸೂರ ನೂರಾರು ಬೆಂಬಲಿಗರೊಂದಿಗೆ ಶುಕ್ರವಾರ ನಾಮಪತ್ರ ಸಲ್ಲಿಸಿದರು.

‘ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ರೈತರ ಹೋರಾಟಕ್ಕೆ ಯಾವುದೇ ಬೆಲೆ ಸಿಗಲಿಲ್ಲ. ಸ್ಥಳೀಯ ಶಾಸಕ ಕೋನರಡ್ಡಿಯವರು ಸರಿಯಾಗಿ ಸ್ಪಂದಿಸದ ಕಾರಣ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವಂತೆ ರೈತಪರ ಹೋರಾಟಗಾರರು ಬೆಂಬಲ ಸೂಚಿಸಿದ ಪರಿಣಾಮ ನಾಮಪತ್ರ ಸಲ್ಲಿಸಿದ್ದೇನೆ. ನವಲಗುಂದ ಕ್ಷೇತ್ರದಲ್ಲಿ ಅಪಾರ ಬೆಂಬಲ ವ್ಯಕ್ತವಾಗಿದ್ದು ಸಾವಿರಾರು ಮತಗಳ ಅಂತರದಿಂದ ಗೆಲುವು ಸಾಧಿಸಿ ರೈತಪರ ಹೋರಾಟಕ್ಕೆ ವಿಧಾನಸಭೆಯಲ್ಲಿ ಹೋರಾಡುತ್ತೇನೆ’ ಎಂದು ಲೋಕನಾಥ ಹೆಬಸೂರ ಹೇಳಿದರು.

ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ, ಕೋಟ್ರೇಶ ಶಿರೂರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry