ಟಿಸಿಎಸ್‌ ಲಾಭ ₹ 6,904 ಕೋಟಿ

7

ಟಿಸಿಎಸ್‌ ಲಾಭ ₹ 6,904 ಕೋಟಿ

Published:
Updated:
ಟಿಸಿಎಸ್‌ ಲಾಭ ₹ 6,904 ಕೋಟಿ

ಮುಂಬೈ: ಟಾಟಾ ಕನ್ಸಲ್ಟನ್ಸಿ ಸರ್ವೀಸಸ್‌ ಸಂಸ್ಥೆಯು ನಾಲ್ಕನೇ ತ್ರೈಮಾಸಿಕದಲ್ಲಿ ₹ 6,904 ಕೋಟಿ ನಿವ್ವಳ ಲಾಭ ಗಳಿಸಿದೆ. ಷೇರುದಾರರಿಗೆ 1:1 ರ ಅನುಪಾತದ ಬೋನಸ್ ಷೇರು ನೀಡಲು ಆಡಳಿತ ಮಂಡಳಿ ಶಿಫಾರಸು ಮಾಡಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 6,608 ಕೋಟಿ ನಿವ್ವಳ ಲಾಭ ಗಳಿಸಿತ್ತು. ಅದಕ್ಕೆ ಹೋಲಿಸಿದರೆ ಲಾಭದ ಪ್ರಮಾಣ ಶೇ 4.4 ರಷ್ಟು ಹೆಚ್ಚಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಟಾಟಾ ಸಮೂಹ ಕಂಪನಿ ಗಳಲ್ಲಿ ಟಿಸಿಎಸ್‌ ಗರಿಷ್ಠ ಪಾಲು ಹೊಂದಿದ್ದು, ತ್ರೈಮಾಸಿಕದಲ್ಲಿ ವರಮಾನ ₹ 29,642 ಕೋಟಿ ಗಳಿಂದ

₹ 32,075 ಕೋಟಿಗೆ ಶೇ 8.2 ರಷ್ಟು ಏರಿಕೆ ಕಂಡಿದೆ.

‘ಡಿಜಿಟಲ್‌ ವಹಿವಾಟಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ನಾಲ್ಕನೇ ತ್ರೈಮಾಸಿಕದ ಉತ್ತಮ ಫಲಿತಾಂಶ ಇದಾಗಿದೆ’ ಎಂದು ಟಿಸಿಎಸ್‌ ಸಿಇಒ ರಾಜೇಶ್‌ ಗೋಪಿನಾಥನ್‌ ತಿಳಿಸಿದ್ದಾರೆ. ಡಿಜಿಟಲ್ ವಹಿವಾಟಿನ ವರಮಾನವು ಶೇ 23.8ರಷ್ಟಿದೆ.

2017–18ನೇ ಹಣಕಾಸು ವರ್ಷದಲ್ಲಿ ನಿವ್ವಳ ಲಾಭ ಶೇ 1.7 ರಷ್ಟು ಇಳಿಕೆಯಾಗಿದ್ದು ₹ 25,826 ಕೋಟಿಗಳಷ್ಟಾಗಿದೆ. ವರಮಾನ ಶೇ 4.3 ರಷ್ಟು ಕಡಿಮೆಯಾಗಿದ್ದು, ₹ 1.23 ಲಕ್ಷ ಕೋಟಿಗೆ ತಲುಪಿದೆ.

ಸಂಪತ್ತು ವೃದ್ಧಿ

ಟಿಸಿಎಸ್‌ ಷೇರು ಶೇ 7 ರಷ್ಟು ಏರಿಕೆ ಕಂಡಿದ್ದು, ಬಂಡವಾಳ ಮೌಲ್ಯ ₹ 41,300 ಕೋಟಿ ಹೆಚ್ಚಾಗಿದೆ. ಇದರಿಂದ ಸಂಸ್ಥೆಯ ಒಟ್ಟು ಬಂಡವಾಳ ಮೌಲ್ಯ ₹ 6.52 ಲಕ್ಷ ಕೋಟಿಗೆ ತಲುಪಿದೆ. ಜನವರಿ 24 ರಂದು ಸಂಸ್ಥೆಯ ಮೌಲ್ಯ ₹ 6 ಲಕ್ಷ ಕೋಟಿಯ ಗಡಿ ತಲುಪಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry